ಬುಧವಾರ, ನವೆಂಬರ್ 13, 2019
19 °C

ಗಣೇಶೋತ್ಸವ; ವಿದ್ಯುತ್ ಪ್ರವಹಿಸಿ ವಕೀಲ ಸಾವು

Published:
Updated:

ಕುಣಿಗಲ್: ತಾಲ್ಲೂಕಿನ ಕದರಪುರ ಗ್ರಾಮದಲ್ಲಿ ಭಾನುವಾರ ಸಂಜೆ ಗಣೇಶೋತ್ಸವದ ಸಮಯದಲ್ಲಿ ವಿದ್ಯುತ್ ಪ್ರವಹಿಸಿ ವಕೀಲರೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಗಣೇಶನ ವಿಸರ್ಜನೆ ಸಮಯದಲ್ಲಿ ಟ್ರಾಕ್ಟರ್‌ನಲ್ಲಿ ಮೂರ್ತಿ ಮೆರವಣಿಗೆ ನಡೆಯುತಿತ್ತು. ಟ್ರಾಕ್ಟರ್ ರಸ್ತೆ ಬದಿಯ ದಿಬ್ಬ ಎರಿದ ವೇಳೆ ಗಣೇಶನ ಮೂರ್ತಿ ಮತ್ತು ಅಲಂಕೃತಗೊಂಡಿದ್ದ ಆರ್ಚ್‌ನ ಕಬ್ಬಿಣದ ಸಾಮಾಗ್ರಿ ವಾಲಿದವು. ಆಗ ವಿದ್ಯುತ್‌ ಪ್ರವಹಿಸಿದೆ. ಅವುಗಳು ಬೀಳದಂತೆ ಹಿಡಿಯಲು ಹೋದ ವಕೀಲ ಲೋಕೇಶ್‌ ಅವರಿಗೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಟ್ರಾಕ್ಟರ್‌ನಿಂದ ಬಿದ್ದ ಲೋಕೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತಪಟ್ಟಿದ್ದಾರೆ. ಟ್ರಾಕ್ಟರ್‌ನಲ್ಲಿದ್ದವರು ಜಿಗಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)