ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಜಿಂಕೆ ಮರಿ ರಕ್ಷಣೆ: ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನವಳ್ಳಿ (ತಿಪಟೂರು): ಬಿದರೆಗುಡಿ ಕಾವಲಿ ಬಳಿ ಆಹಾರ ಹುಡುಕಿ ಆಚೆ ಬಂದಿದ್ದ, ನಾಯಿ ಬಾಯಿಗೆ ತುತ್ತಾಗಲಿದ್ದ ಜಿಂಕೆ ಮರಿಯನ್ನು ಗ್ರಾಮಸ್ಥರೊಬ್ಬರು ರಕ್ಷಿಸಿದ್ದಾರೆ.

ಜಿಂಕೆ ಮರಿಯನ್ನು ನಾಯಿ ಹಿಂಡು ಓಡಿಸಿಕೊಂಡು ಬರುತ್ತಿದ್ದುದನ್ನು ನೋಡಿದ ಬಸವರಾಜು ಹಲ್ಕೂರಯ್ಯ ಬೀದಿಮನೆ ಅವರು ನಾಯಿಗಳನ್ನು ಓಡಿಸಿ ಮರಿಯನ್ನು ರಕ್ಷಿಸಿದರು.

ಮನೆಯಲ್ಲಿ ಆರೈಕೆ ಮಾಡಿ ನಂತರ ಸ್ಥಳೀಯ ಪಶು ಆಸ್ಪತ್ರೆಗೆ ಹೊತ್ತೊಯ್ದರು. ಗಾಯಗೊಂಡಿದ್ದ ಜಿಂಕೆ ಮರಿಗೆ ಪಶು ಪರೀಕ್ಷಕಿ ಸುಜಾತಾ ಚಿಕಿತ್ಸೆ ನೀಡಿದರು.

ವಿಷಯ ತಿಳಿದ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಿಕಾಂತ್, ಎಸ್‍ಐ ಮುದ್ದಯ್ಯ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜು ಅವರ ಕಾಳಜಿಯನ್ನು ಶ್ಲಾಘಿಸಿ ಜಿಂಕೆ ಮರಿಯನ್ನು ಕರೆದೊಯ್ದರು. ಜಿಂಕೆ ಮರಿಯನ್ನು ಆರೈಕೆ ಮಾಡಿ ಸ್ವತಂತ್ರವಾಗಿ ಬದುಕುವ ಶಕ್ತಿ ಬಂದಾಗ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು