ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಜರಿಗೆ ಮೀಸಲಾತಿ | ಹೋರಾಟ ಅನಿವಾರ್ಯ: ಮಾಜಿ ಸಚಿವ ಎಂ.ಆರ್.ಸೀತಾರಾಂ

ಸಮುದಾಯದ ವಿದ್ಯಾರ್ಥಿನಿಯರ ಹೊಸ ಹಾಸ್ಟೆಲ್‌ ಉದ್ಘಾಟನೆ
Published 17 ಜುಲೈ 2023, 20:20 IST
Last Updated 17 ಜುಲೈ 2023, 20:20 IST
ಅಕ್ಷರ ಗಾತ್ರ

ತುಮಕೂರು: ಬಲಿಜ ಸಮುದಾಯದ ಶಿಕ್ಷಣ ಮೀಸಲಾತಿಯನ್ನು ರಾಜಕೀಯ ಮತ್ತು ಉದ್ಯೋಗಕ್ಕೂ ವಿಸ್ತರಿಸುವಂತೆ ಸಮುದಾಯದ ಮುಖಂಡ, ಮಾಜಿ ಸಚಿವ ಎಂ.ಆರ್.ಸೀತಾರಾಂ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಬಲಿಜ ಸಂಘ, ಯೋಗಿನಾರಾಯಣ ಸೇವಾ ಸಮಿತಿ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ ಜೀವ ಸಮಾಧಿ ಮಹೋತ್ಸವ ಹಾಗೂ ವಿದ್ಯಾರ್ಥಿ ನಿಲಯದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ಬಲಿಜ ಸಮಾಜಕ್ಕೆ ದೊರೆತಿರುವ 2ಎ ಮೀಸಲಾತಿಯನ್ನು ಉದ್ಯೋಗ ಮತ್ತು ರಾಜಕೀಯಕ್ಕೂ ವಿಸ್ತರಿಸಬೇಕು. ಸರ್ಕಾರದ ಮೇಲೆ ಒತ್ತಡ ತರಲು ಸಮುದಾಯ ಒಗ್ಗೂಡಿ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಮೀಸಲಾತಿಗೆ ಒಗ್ಗಟ್ಟಿನ ಹೋರಾಟ ಒಂದೇ ಅಸ್ತ್ರ ಎಂದರು.

ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂಬ ಆಶಯ ಈಡೇರಿದೆ. ದಾನಿಗಳ ಸಹಾಯದಿಂದ ವಿದ್ಯಾರ್ಥಿ ನಿಲಯದ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣ ಮಾಡಿದ್ದಾರೆ. ಸಮುದಾಯದ ಪ್ರತಿಭಾವಂತ, ಬಡ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶಾಸಕ ಜಿ.ಬಿ.ಜೋತಿಗಣೇಶ್‌, ನಟಿ ತಾರಾ ಅನುರಾಧ ಮತ್ತು ಸಮುದಾಯದ ಮುಖಂಡ ಎನ್.ಗೋವಿಂದರಾಜು ಮಾತನಾಡಿದರು.  ಹಾಸ್ಟೆಲ್‌ ನಿರ್ಮಾಣಕ್ಕೆ ಸಹಕರಿಸಿದ ಸಮುದಾಯದ ಹಿರಿಯರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 

Cut-off box - ವಿದ್ಯಾರ್ಥಿನಿಯರ ಹಾಸ್ಟೆಲ್‌ ತುಮಕೂರು ಜಿಲ್ಲಾ ಬಲಿಜ ಸಂಘದಿಂದ ನಗರದಲ್ಲಿ ಬಾಲಕಿಯರಿಗಾಗಿ ನೂತನ ಆರಂಭಿಸಲಾದ ವಸತಿ ನಿಲಯದಲ್ಲಿ  ಸಮುದಾಯದ ವಿದ್ಯಾರ್ಥಿನಿಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.  ಜಿಲ್ಲೆಯಷ್ಟೇ ಅಲ್ಲದೆ ಹೊರ ಜಿಲ್ಲೆಯವರಿಗೂ ಪ್ರವೇಶ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿಯಿಂದ ಉನ್ನತ ಶಿಕ್ಷಣ ಎಂಜಿನಿಯರಿಂಗ್ ವೈದ್ಯಕೀಯ ಸೇರಿದಂತೆ ಎಲ್ಲಾ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ವಿದ್ಯಾರ್ಥಿನಿಯರು ಪ್ರವೇಶ ಪಡೆಯಬಹುದು. ಪ್ರವೇಶ ಹಾಗೂ ಇತರೆ ಮಾಹಿತಿಗೆ ಮೊಬೈಲ್‌ ಸಂಖ್ಯೆ 9741669937 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT