ದೇಶದ ಪ್ರಗತಿಗೆ ಶ್ರಮಿಸಿ

7
ಎಂಜಿನಿಯರ್ಸ್‌ ದಿನಾಚರಣೆ 2018 ಕಾರ್ಯಕ್ರಮದಲ್ಲಿ ಕೆ.ಎಸ್.ಚಂದ್ರಶೇಖರ್ ಅಭಿಪ್ರಾಯ

ದೇಶದ ಪ್ರಗತಿಗೆ ಶ್ರಮಿಸಿ

Published:
Updated:
Deccan Herald

ತುಮಕೂರು: ನಾವು ಮಾಡುವಂತಹ ಕೆಲಸ ಕಾರ್ಯಗಳು ಸಮಾಜಕ್ಕೆ, ದೇಶದ ಪ್ರಗತಿ ಹಾಗೂ ಒಳಿತಿಗೆ ಕಾರಣವಾಗಿರಬೇಕು ಎಂದು ಬೆಂಗಳೂರಿನ ಕೈಗಾರಿಕೋದ್ಯಮಿ ಕೆ.ಎಸ್.ಚಂದ್ರಶೇಖರ್ ಅಭಿ‍ಪ್ರಾಯಪಟ್ಟರು. 

ನಗರದ ಆರ್ಯಭಾರತಿ ಪಾಲಿಟೆಕ್ನಿಕ್‌ನಲ್ಲಿ ಮೆಕಾನಿಕಲ್‌ ಮತ್ತು ಆಟೊಮೊಬೈಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಐಎಸ್‌ಟಿಇ ವಿದ್ಯಾರ್ಥಿ ಘಟಕದ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಅವರ 158 ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಎಂಜಿನಿಯರ್ಸ್‌ ದಿನಾಚರಣೆ 2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಏಳಿಗೆಗೆ ದುಡಿಯುವಂತಹವರು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ಶ್ರೇಷ್ಠ ವ್ಯಕ್ತಿಗಳಾಗಬಹುದು ಎಂದರು.

ಕೌಶಲಯುತ ತಾಂತ್ರಿಕ ಶಿಕ್ಷಣವನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗದ ಅವಕಾಶವನ್ನು ನೀಡುವುದರ ಮೂಲಕ ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಕೆ.ಆರ್.ಅಶೋಕ ಮಾತನಾಡಿ, ’ಸಾಧನೆ ಮಾಡುವವರಿಗೆ ಉನ್ನತ ಶಿಕ್ಷಣ ಅಗತ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಆವಿಷ್ಕಾರದ ಮನೋಭಾವವಿರುತ್ತದೆ. ಅದನ್ನು ಹೊರತೆಗೆಯುವ ಹಾಗೂ ಪ್ರೋತ್ಸಾಹಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !