ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರ ಪ್ರದೇಶದಲ್ಲಿ ಕ್ಷೀರ ಕ್ರಾಂತಿ’

Last Updated 4 ಜನವರಿ 2021, 3:11 IST
ಅಕ್ಷರ ಗಾತ್ರ

ಶಿರಾ: ಬರಪೀಡಿತ ತಾಲ್ಲೂಕಿನ ರೈತರು ಹಾಲು ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕ್ಷೀರಕ್ರಾಂತಿ ಮಾಡಿರುವುದು ಸಂತಸದ ವಿಷಯ ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕ್ಯಾಲೆಂಡರ್ ಬಿಡುಗಡೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಡೈರಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲ್ಲೂಕಿನಲಿ ಪ್ರತಿನಿತ್ಯ ಸುಮಾರು 50 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿರುವುದು ಸಂತೋಷದ ವಿಷಯ. ಹಾಲು ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸಿದರೆ ರೈತರಿಗೆ ಹೆಚ್ಚು ಲಾಭವಿರುವುದು ಎಂದರು.

ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ‘ಇತ್ತೀಚೆಗೆ ಹಾಲು ಮಾರಾಟದಲ್ಲಿ ಚೇತರಿಕೆ ಕಾಣುತ್ತಿದೆ. ತುಮುಲ್ ಶಿರಾದಲ್ಲಿ ₹1.17 ಕೋಟಿ ವೆಚ್ಚದಲ್ಲಿ ಕ್ಷೀರಭವನದ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮುಲ್‌ಗೆ ಸೇರಿದ ಜಮೀನಿದ್ದು ಅಲ್ಲಿ ಹೈಟೆಕ್ ಮಿಲ್ಕ್ ಪಾರ್ಲರ್ ತೆರೆಯುವ ಯೋಜನೆ ಇದೆ’ ಎಂದರು

ತುಮುಲ್ ಅಧ್ಯಕ್ಷ ಮಹಲಿಂಗಪ್ಪ ಮಾತನಾಡಿ, ‘ಕೊರೊನಾದಿಂದಾಗಿ ತುಮುಲ್ ಸಂಕಷ್ಟದಲ್ಲಿದೆ. ನಿತ್ಯ ₹8 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಮಾರಾಟ ಈಗ ಚೇತರಿಕೆ ಕಾಣುತ್ತಿರುವುದು ಸಂತಸದ ವಿಷಯ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅಂಬುಜಾ ಎಸ್.ಆರ್.ಗೌಡ, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ತುಮುಲ್ ಉಪ ವ್ಯವಸ್ಥಾಪಕ ವೀರಣ್ಣ, ಸಹಾಯಕ ವ್ಯವಸ್ಥಾಪಕ ಮಧುಸೂದನ್, ತಿಪ್ಪೇಸ್ವಾಮಿ, ದಿವಾಕರ್, ಪವನ್, ಬರಗೂರು ಶಿವಕುಮಾರ್, ಹೊನ್ನೇಶ್ ಗೌಡ, ನಿಡಗಟ್ಟೆ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT