ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಸ್ಪೋರ್ಟ್ಸ್‌ನಿಂದ ಉದ್ಯೋಗ ಸೃಷ್ಟಿ

ಎಸ್‌ಎಸ್‌ಐಟಿಯಲ್ಲಿ ಇ-ಸ್ಪರ್ಧೆ ಆಯೋಜನೆ
Published 25 ಜನವರಿ 2024, 5:35 IST
Last Updated 25 ಜನವರಿ 2024, 5:35 IST
ಅಕ್ಷರ ಗಾತ್ರ

ತುಮಕೂರು: ಮುಂದಿನ ದಿನಗಳಲ್ಲಿ ಇ-ಆಟಗಳು ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದು ‘ಸಾಹೇ’ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಲಿಂಗೇಗೌಡ ತಿಳಿಸಿದರು.

ನಗರದ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಬುಧವಾರ ಎಸ್‍ಎಸ್‍ಐಬಿಎಂ ವಿಭಾಗ ಮತ್ತು ವಸಿಷ್ಠ-ಇ ಸ್ಪೋರ್ಟ್ಸ್‌ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಗೇಮ್ ಆನ್‌ ಕ್ಯಾಂಪಸ್’ ಇ-ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಆನ್‍ಲೈನ್‌ ಆಟಗಳು ಜಾಗತಿಕ ವೇದಿಕೆಯಲ್ಲಿ ಕ್ರೀಡೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಆನ್‍ಲೈನ್ ಗೇಮಿಂಗ್‌ ವಿಭಾಗವು ದೇಶದ ಮಾಧ್ಯಮ ಮತ್ತು ಮನರಂಜನಾ ವಲಯದ ನಾಲ್ಕನೇ ದೊಡ್ಡ ವಿಭಾಗವಾಗಿ ಹೊರಹೊಮ್ಮುತ್ತಿದೆ ಎಂದರು.

ಎಸ್‍ಎಸ್‍ಐಟಿ ಪ್ರಾಂಶುಪಾಲ ಎಂ.ಎಸ್‌.ರವಿಪ್ರಕಾಶ್‌, ‘ಇ–ಆಟಗಳನ್ನು ಬಿಹಾರದಲ್ಲಿ ಶಿಕ್ಷಣದಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಏಷ್ಯನ್‌ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗಲಿದೆ’ ಎಂದು ಹೇಳಿದರು.

‘ಸಾಹೇ’ ವಿಶ್ವವಿದ್ಯಾಲಯದ ವಿವೇಕ್ ವೀರಯ್ಯ, ಎಸ್‌ಎಸ್‌ಐಬಿಎಂ ಪ್ರಾಂಶುಪಾಲರಾದ ಜಿ.ಮಮತಾ, ಇ-ಸ್ಪೋರ್ಟ್ಸ್‌ ಸಂಯೋಜಕ ಸಂದೀಪ್‌ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT