ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ಸಹಾಯಕ ಕಿರಿಯ ಎಂಜಿನಿಯರ್ ಆತ್ಮಹತ್ಯೆ

Published 6 ಜುಲೈ 2023, 13:54 IST
Last Updated 6 ಜುಲೈ 2023, 13:54 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಖಾಸಗಿ ವಸತಿ ನಿಲಯದ ಕೊಠಡಿಯಲ್ಲಿ ಬುಧವಾರ ರಾತ್ರಿ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದ ಸಹಾಯಕ ಕಿರಿಯ ಎಂಜಿನಿಯರ್ ಎಸ್. ಮಂಜುನಾಥ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಿಂದ ಪಟ್ಟಣಕ್ಕೆ ಬಂದಿದ್ದ ಮಂಜುನಾಥ್‌ ವೈಎನ್ ಹೊಸಕೋಟೆಗೆ ಹೋಗಲು ಬಸ್‌ ಇಲ್ಲ ಎಂದು ತಿಳಿಸಿ ಬುಧವಾರ ರಾತ್ರಿ ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ಕೊಠಡಿ ಪಡೆದಿದ್ದರು. ಗುರುವಾರ ಬೆಳಿಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಬಾರದಿರುವುದರಿಂದ ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ ಕಿಟಕಿಯಿಂದ ನೋಡಿದಾಗ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ತಿಳಿದಿದೆ.

ಮದುವೆ ವಿಚಾರದಲ್ಲಿ ಬೇಸರಗೊಂಡು ಮಂಜುನಾಥ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಅಣ್ಣ ಪಟ್ಟಣದ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT