ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಉದ್ಯಮಶೀಲತಾ ತರಬೇತಿ ಕೇಂದ್ರ ಸ್ಥಾಪನೆ

Published 26 ಏಪ್ರಿಲ್ 2024, 4:23 IST
Last Updated 26 ಏಪ್ರಿಲ್ 2024, 4:23 IST
ಅಕ್ಷರ ಗಾತ್ರ

ತುಮಕೂರು: ವಿಶ್ವವಿದ್ಯಾಲಯದಲ್ಲಿ ‘ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತೆಗಾಗಿ ಸಹಭಾಗಿತ್ವ’ ಕೇಂದ್ರ ಆರಂಭದ ಒಪ್ಪಂದಕ್ಕೆ ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಇಂಗ್ಲೆಂಡ್‌ ಸೌತ್‌ ವೇಲ್ಸ್‌ ವಿ.ವಿ ತರಬೇತಿ ವ್ಯವಸ್ಥಾಪಕ ರಿಚಿ ಟರ್ನರ್‌ ಸಹಿ ಹಾಕಿದ್ದಾರೆ.

ವಿ.ವಿ ವ್ಯಾಪ್ತಿಯ ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸ್ಥಳೀಯ ಸಮುದಾಯಗಳಿಗೆ ಸುಸ್ಥಿರ ಉದ್ಯಮಶೀಲತೆ ಮತ್ತು ಹೊಸ ಅಧ್ಯಯನ ಪರಿಸರವನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದರ ಕುರಿತು ಸೌತ್ ವೇಲ್ಸ್‌ ವಿ.ವಿಯ ತರಬೇತಿ ಯೋಜನೆಗಳು ಸಲಹೆ ನೀಡುತ್ತವೆ.

ತರಬೇತಿ ಕೇಂದ್ರಕ್ಕೆ ಇಂಗ್ಲೆಂಡ್‍ನ ಗ್ಲೋಬಲ್‌ ವೇಲ್ಸ್‌ನಿಂದ ಧನ ಸಹಾಯ ಪಡೆದುಕೊಳ್ಳಲಾಗುತ್ತದೆ. ರಿಚಿ ಟರ್ನರ್‌ ಅವರು ತುಮಕೂರು ವಿ.ವಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಉದ್ಯಮಿಗಳ ಜತೆಗೆ ಈ ಯೋಜನೆ ಕುರಿತು ಚರ್ಚಿಸಿದ್ದಾರೆ. ವಿ.ವಿಯು ಈಗಾಗಲೇ ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತಾ ಕಾರ್ಯಕ್ರಮಗಳಿಗೆ ಪ್ರಸ್ತಾವ ಮತ್ತು ಕಾರ್ಯತಂತ್ರ ಅಭಿವೃದ್ಧಿಪಡಿಸಿದೆ.

ಆಹಾರ, ಸಾವಯವ ಕೃಷಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಅವಕಾಶಗಳ ಜತೆಗೆ ವಿನಿಮಯ ಕಾರ್ಯಕ್ರಮ ಅಭಿವೃದ್ಧಿ ಪಡಿಸುವುದು ಮತ್ತು ಹೂಡಿಕೆ ಅವಕಾಶಗಳನ್ನು ತೆರೆಯುತ್ತದೆ.

‘ಕುಲಪತಿ ಅವರ ಮಹತ್ವಾಕಾಂಕ್ಷೆಯನ್ನು ಅವರ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಲ್ಲಿ ಕಾಣಬಹುದು. ಹೊಸ ತರಬೇತಿ ಕೇಂದ್ರದ ಕಾರ್ಯ ನೋಡಲು ಎದುರು ನೋಡುತ್ತಿದ್ದೇನೆ’ ಎಂದು ರಿಚಿ ಟರ್ನರ್‌ ತಿಳಿಸಿದ್ದಾರೆ.

‘ಇದು ತುಮಕೂರು ವಿಶ್ವವಿದ್ಯಾಲಯದ ಜಾಗತಿಕ ಮನ್ನಣೆ ಮತ್ತು ಶ್ರೇಷ್ಠತೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲು’ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT