ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಮೋಡ ಕವಿದ ವಾತಾವರಣ; ಹೂವು ಬೆಳೆಗಾರರಿಗೆ ನಷ್ಟದ ಭೀತಿ

Last Updated 25 ಜುಲೈ 2021, 3:09 IST
ಅಕ್ಷರ ಗಾತ್ರ

ತೋವಿನಕೆರೆ: ಗ್ರಾಮದ ಸುತ್ತಮುತ್ತಲಿನ ಹೂವು ಬೆಳೆಗಾರರು ಲಾಕ್‌ಡೌನ್‌ನಿಂದ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದರು. ಈಗ ತುಂತುರು ಮಳೆ ಹಾಗೂ ಮೋಡದ ವಾತಾವರಣದಿಂದಾಗಿ ಮತ್ತೆ ನಷ್ಟದ ಭೀತಿ ಎದುರಾಗಿದೆ.

ಶ್ರವಣ ಮಾಸದಲ್ಲಿನ ಹಬ್ಬ, ಮದುವೆ ಮತ್ತು ಸಮಾರಂಭಗಳಿಗೆ ಹೂವಿನ ಫಸಲು ಬರುವಂತೆ ಯೋಚಿಸಿ ನೂರಾರು ಎಕರೆಯಲ್ಲಿ ಹೂವು ಬೆಳೆದಿದ್ದಾರೆ. ಆದರೀಗ ಹೂವಿನ ತಾಕುಗಳು ಮಳೆ ನೀರು ಕುಡಿದು ಬೇರು ಕೊಳೆಯಲು ಪ್ರಾರಂಭವಾಗಿದೆ. ಗಿಡಗಳಿಗೆ ಸೊರಗು ರೋಗ ಬರುವ ಮುನ್ಸೂಚನೆ ಕಂಡು ಬರುತ್ತಿದೆ. ಗಿಡಗಳಿಗೆ ಹುಳಗಳು ಬಿದ್ದು ಹಾಳಾಗುವುದು ಹೆಚ್ಚುತ್ತಿದೆ. ಮೋಡದ ಕಾರಣ ಹೂವು ಸರಿಯಾಗಿ ಬರದೇ ಮೊಗ್ಗಿನಲ್ಲಿ ನಲುಗುತ್ತಿವೆ.

ಮೋಡದ ವಾತಾವರಣದಲ್ಲಿ ಔಷಧಿ ಸಿಂಪಡಣೆ ಮಾಡಿದರೆ ಉಪಯೋಗವಿಲ್ಲ. ಬಿಸಿಲು ಇದ್ದರೆ ಹೂವಿನ ಬೇಸಾಯಕ್ಕೆ ಸೂಕ್ತವಾಗಿರುತ್ತದೆ ಎನ್ನುತ್ತಾರೆ ಬೆಳೆಗಾರ ಉಪ್ಪಾರ ಪಾಳ್ಯದ ಜೆ.ಸಿ.ಸೋಮಶೇಖರ್.

ಹೂವಿನ ತಾಕುಗಳಲ್ಲಿ ಇಳಿಜಾರು ಇದ್ದರೆ ಬಿದ್ದ ಮಳೆ ನೀರು ಹರಿದು ಹೋಗುತ್ತದೆ. ತುಂತುರು ಮಳೆಯಾದಾಗ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ.

ಹಲವು ದಿನಗಳ ಮೋಡದ ವಾತಾವರಣ ಹೂವಿನ ತಾಕುಗಳಿಗೆ ಸಮಸ್ಯೆ ತರುತ್ತಿದೆ. ಈಗಾಗಲೇ ರೋಗ ಕಾಣಿಸಿಕೊಂಡಿದ್ದು, ಔಷಧಿ ಸಿಂಪಡಣೆ ಮಾಡಿದ ದಿನವೇ ಮಳೆ ಬಂದ ಕಾರಣ ₹2,000 ನಷ್ಟವಾಯಿತು ಎನ್ನುತ್ತಾರೆ ಬೆಳೆಗಾರ ಮಣುವಿನಕುರಿಕೆಕಾವಲಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT