ಮಂಗಳವಾರ, ಮಾರ್ಚ್ 28, 2023
33 °C

ಗೊಬ್ಬರಕ್ಕೆ ನಿಲ್ಲದ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಯೂರಿಯಾ ಗೊಬ್ಬರಕ್ಕಾಗಿ ತಾಲ್ಲೂಕಿನ ಹೆಬ್ಬೂರು ಅಂಗಡಿಯ ಮುಂದೆ ರೈತರ ನೂಕು ನುಗ್ಗಲು ಕಂಡು ಬಂತು.

ಬೆಳಗಿನ ಜಾವ 4 ಗಂಟೆಗೆ ಕೇಂದ್ರದ ಮುಂದೆ ಜಮಾಯಿಸಿದ ನೂರಾರು ರೈತರು ಸರದಿ ಸಾಲಿನಲ್ಲಿ ಗೊಬ್ಬರಕ್ಕಾಗಿ ಕಾದು ನಿಂತರು. ಮಧ್ಯಾಹ್ನ 2 ಗಂಟೆಯಾದರೂ ಗೊಬ್ಬರದ ಅಂಗಡಿ ತೆರೆಯದೆ ಸರದಿ ಸಾಲಿನಲ್ಲಿ ಕಾದು ಸುಸ್ತಾದರು. ಸರದಿ ಬಿಟ್ಟರೆ ಗೊಬ್ಬರ ಸಿಗುವುದಿಲ್ಲ ಎಂಬ ಆತಂಕದಿಂದ ಅನೇಕರು ಊಟ, ತಿಂಡಿ ಬಿಟ್ಟು ದಿನವಿಡೀ ಸರದಿಯಲ್ಲಿ ಕಾದು ಕುಳಿತರು.

ಈ ಸಲ ಉತ್ತಮ ಮಳೆಯಾಗಿರುವುದರಿಂದ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಬೆಳೆಗೆ ಮೇಲು ಗೊಬ್ಬರವಾಗಿ ಯೂರಿಯಾ ನೀಡಬೇಕಿದ್ದು, ಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದಾರೆ. ಗೊಬ್ಬರ ಹಾಕುವುದು ತಡವಾದಷ್ಟು ಬೆಳೆ ಇಳುವರಿಯಲ್ಲಿ ಕುಂಟಿತವಾಗುತ್ತದೆ. ಹಾಗಾಗಿ ಅನೇಕರು ಗೊಬ್ಬರಕ್ಕೆ ಪರದಾಡುತ್ತಿದ್ದಾರೆ. ಖಾಸಗಿ ಅಂಗಡಿಗಳ ಮುಂದೆ ಕಾದು ಸುಸ್ತಾಗುತ್ತಿದ್ದಾರೆ ಎಂದು ಯುವ ಮುಖಂಡ ಹೆಬ್ಬೂರು ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಹೆಬ್ಬೂರು ಭಾಗದಲ್ಲಿ ಆಗ್ರೋ ಕೇಂದ್ರಗಳಿಗೆ ಗೊಬ್ಬರ ಪೂರೈಕೆಯಾಗುತ್ತಿದೆ. ಗೊಬ್ಬರ ಖರೀದಿಸುವ ರೈತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಗೊಬ್ಬರದ ದಾಸ್ತಾನು ಬೇಗ ಖಾಲಿಯಾಗುತ್ತಿದೆ. ಅನೇಕರು 5, 10 ಚೀಲಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ರೈತರು ದಿನಗಟ್ಟಲೇ ಕಾದು ಗೊಬ್ಬರ ಖರೀದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.