ಭಾನುವಾರ, ಜೂನ್ 20, 2021
28 °C
ಲಕ್ಷಾಂತರ ಮೌಲ್ಯದ ಹೂವು ನಾಶ

ತಗ್ಗಿದ ಬೇಡಿಕೆ: ಹಸುಗಳಿಗೆ ಆಹಾರವಾಗುತ್ತಿದೆ ಹೂವು

ಎಚ್.ಜೆ.ಪದ್ಮರಾಜು Updated:

ಅಕ್ಷರ ಗಾತ್ರ : | |

Prajavani

ತೋವಿನಕೆರೆ: ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯಲ್ಲಿ ನೂರಾರು ಎಕರೆ ಪ್ರದೇಶ ಹೂವಿನಿಂದ ಆವೃತವಾಗಿದೆ. ಬೆಳೆದ ರೈತನನ್ನು ಮಾತನಾಡಿಸಿದರೆ ಧ್ವನಿಗಿಂತ ಮೊದಲು ಕಣ್ಣೀರು ಕಾಣಿಸುತ್ತದೆ.

ಎರಡು ವರ್ಷಗಳಿಂದ ಹೂವಿನ ಬೆಲೆ ಕುಸಿದಿದೆ. ಹೂವು ಬೆಳೆಗಾರರು ಲಕ್ಷಾಂತರ ಮೌಲ್ಯದ ಹೂವನ್ನು ನಾಶಮಾಡಿದ್ದಾರೆ.

ಹೋಬಳಿಯಲ್ಲಿ 500ಕ್ಕೂ ಹೆಚ್ಚು ರೈತರು ಚಾಂದಿನಿ, ಬಟನ್ಸ್, ಸೇವಂತಿಗೆ ಬೆಳೆಯುತ್ತಿದ್ದಾರೆ. ಕಳೆದ ದೀಪಾವಳಿಯಲ್ಲಿ ಕೆಲವರು ಉತ್ತಮ ಬೆಳೆಗೆ ಮಾರಾಟ ಮಾಡಿದ್ದರು. ವರ್ಷದಲ್ಲಿ ಎರಡು ಸಲ ಕೋವಿಡ್‌ ಬಂದು ಕೋಟ್ಯಂತರ ರೂಪಾಯಿ ತರುತ್ತಿದ್ದ ಹೂವಿನ ಬೆಳೆ ಸದ್ಯ ರೈತರ ಕೈಹಿಡಿದಿಲ್ಲ.

ಹೂವನ್ನು ಖರೀದಿಸುವವರು ಇಲ್ಲದೇ, ತಾಕುಗಳಲ್ಲಿ ಬಿಟ್ಟು ಉಳುಮೆ ಮಾಡಿಸುತ್ತಿದ್ದಾರೆ. ಕೆಲವರು ಯಂತ್ರದ ಮೂಲಕ ಭೂಮಿಗೆ ಗೊಬ್ಬರವಾಗಲಿ ಎಂದು ಬುಡಕ್ಕೆ ಕಟಾವು ಮಾಡುತ್ತಿದ್ದಾರೆ. ಹೆಚ್ಚಿನವರು ಜಾನುವಾರುಗಳಿಗೆ ಮೇವಾಗಿ ಉಪಯೋಗಿಸುತ್ತಿದ್ದಾರೆ. ಹಲವರು ನೀರು ಹಾಯಿಸುವುದನ್ನು ನಿಲ್ಲಿಸಿ ಒಣಗಲು ಬಿಟ್ಟಿದ್ದಾರೆ.

ಅಜ್ಜಿಹಳ್ಳಿ, ತೋವಿನಕೆರೆ, ಸೂರೇನಹಳ್ಳಿ, ದೇವಾರಹಳ್ಳಿ, ಥರಟಿ, ಅಗ್ರಹಾರ, ಬಡಮುದ್ದಯ್ಯನಪಾಳ್ಯ, ಕುರಂಕೋಟೆ, ಮಣುವಿನಕುರಿಕೆ, ದೊಡ್ಡನರಸಯ್ಯನ ಪಾಳ್ಯ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿವಿಧ ಜಾತಿ ಹೂವು ಬೆಳೆಯುತ್ತಾರೆ. ಪ್ರತಿ ರೈತ ಕನಿಷ್ಠ ₹50 ಸಾವಿರದಿಂದ ₹1 ಲಕ್ಷದವರೆಗೆ ವ್ಯಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು