ಕೊರಟಗೆರೆ: ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣ ದೇವರಾಯರ ವ್ಯಕ್ತಿತ್ವ ಇಡೀ ಸಮಾಜಕ್ಕೆ ಆದರ್ಶವಾಗಿದೆ ಎಂದು ತಾಲ್ಲೂಕು ಬಲಿಜ ಸಮಾಜದ ಅಧ್ಯಕ್ಷ ಎನ್. ಪದ್ಮನಾಭ್ ತಿಳಿಸಿದರು.

ಪಟ್ಟಣದಲ್ಲಿ ಬಲಿಜ ಸಂಘದಿಂದ ಏರ್ಪಡಿಸಿದ್ದ ಶ್ರೀಕೃಷ್ಣ ದೇವರಾಯರ 557ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷ್ಣ ದೇವರಾಯ ಅವರು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಸಮಾಜದ ಆಸ್ತಿ. ಅವರ ಆದರ್ಶ ಜೀವನ ಇಂದಿನ ಸಮಾಜಕ್ಕೆ ಅನುಕರಣೀಯ. ವಿಜಯನಗರ ಸಾಮ್ರಾಜ್ಯದ ಅರಸರಾಗಿ ಕನ್ನಡಕ್ಕೆ ಅವರು ನೀಡಿದ ಪ್ರಾಧಾನ್ಯ ಅಪಾರವಾದುದು. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಂದಿನ ಕಾಲಕ್ಕೆ ಸಾಹಿತ್ಯ ಕ್ಷೇತ್ರವನ್ನು ಬೆಳೆಸಿದ ಶ್ರೇಷ್ಠ ಚಕ್ರವರ್ತಿಯಾಗಿದ್ದಾರೆ ಎಂದರು.

ತಾಲ್ಲೂಕು ಬಲಿಜ ಸಂಘದ ಪತ್ರಿಕಾ ಕಾರ್ಯದರ್ಶಿ ಕೆ.ವಿ. ಪುರುಷೋತ್ತಮ್ ಮಾತನಾಡಿ, ಶ್ರೀಕೃಷ್ಣ ದೇವರಾಯ ತಮ್ಮ ಆಗಾಧ ಶಕ್ತಿ, ಸಾಮರ್ಥ್ಯದೊಂದಿಗೆ ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ ಮಹಾನ್ ಚೇತನ ಎಂದು ಬಣ್ಣಿಸಿದರು.

ಹಿಂದೂ ಧರ್ಮದ ಅಭಿವೃದ್ಧಿಗೆ ಶ್ರಮಿಸಿದ ಕುರುಹಾಗಿ ಹಜಾರರಾಮ ದೇವಸ್ಥಾನ, ಹಂಪೆಯ ವಿಠಲಸ್ವಾಮಿ ದೇವಸ್ಥಾನ ನಿರ್ಮಾಣದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ದೇಶದಲ್ಲೇ ಪ್ರಸಿದ್ಧಿಯಾಗಿರುವ ತಿರುಪತಿ ತಿರುಮಲ ದೇವಾಲಯದ ಅಭಿವೃದ್ಧಿಗೆ ಅವರು ಅನುಪಮ ಕೊಡುಗೆ ಸಲ್ಲಿಸಿದ್ದಾರೆ ಎಂದರು.

ತಾಲ್ಲೂಕು ಮಹಿಳಾ ಬಲಿಜ ಸಂಘದ ಅಧ್ಯಕ್ಷೆ ಗಿರಿಜಾ ಕೃಷ್ಣಪ್ಪ, ಮಂಜುಳಾ, ಮಯೂರ, ಗೋವಿಂದ ರಾಜು ಮಾತನಾಡಿದರು. ಕೈವಾರ ಯೋಗಿನಾರೇಯಣ, ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಪೆರಿಯಾರ್ ರಾಮಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಸಂಘದ ಉಪಾಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ಖಜಾಂಚಿ ವೆಂಕಟೇಶ್, ಯುವ ಅಧ್ಯಕ್ಷ ಸಂಜಯ್, ಪದಾಧಿಕಾರಿಗಳಾದ ಕೆ.ವಿ. ಶ್ರೀನಿವಾಸ್, ಫ್ರೆಂಡ್ಸ್ ಗ್ರೂಪ್ನ ರವಿಕುಮಾರ್, ಕೆ.ಬಿ. ಲೋಕೇಶ್, ಬೆನಕಾ ವೆಂಕಟೇಶ್, ಕೊಡ್ಲಹಳ್ಳಿ ಜಗದೀಶ್, ವೆಂಕಟಾಚಲ, ಶಿವಕುಮಾರ್, ರೋಹಿತ್, ಕೇಶವಮೂರ್ತಿ, ಜಯರಾಮ್, ಆರ್.ಜಿ.ಎಸ್. ಅನಿಲ್ಕುಮಾರ್, ದಯಾನಂದ್, ನಯನ್, ರಮೇಶ್ ಬಾಬು, ಗೀತಾ, ಸುಚಿತ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.