ತುಮಕೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಇಂಧನ ಬೆಲೆ ಪ್ರತಿದಿನವೂ ಹೆಚ್ಚಳವಾಗು ತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ನೇತೃತ್ವ ದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಎತ್ತಿನಗಾಡಿ, ಜಟಕಾಬಂಡಿ, ಸೈಕಲ್ ಜಾಥಾ ಮೂಲಕ ನಗರದ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿ, ಇಂಧನ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದೆ. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರು, ರೈತರನ್ನು ಕೇಂದ್ರ ಸರ್ಕಾರ ಸುಲಿಗೆ ಮಾಡುತ್ತಿದೆ. ಇಂಧನ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನಸಾಮಾನ್ಯರು, ಬಡವರು, ಮಧ್ಯಮ ವರ್ಗದವರು ಬದುಕುವುದು ಕಷ್ಟಕರವಾಗಿದೆ. ಜನರ ಜೀವನ ನರಕ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಜನಸಾಮಾನ್ಯರ ಕಷ್ಟಗಳಿಗೆ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುತ್ತಿಲ್ಲ. ಸಾರಿಗೆ, ಟೆಲಿಕಾಂ, ಎಚ್‌ಎಎಲ್‌ನಂತಹ ಸಂಸ್ಥೆಗಳನ್ನು ಮಾರಾಟಮಾಡಿ ಅಂಬಾನಿ, ಅದಾನಿ ಅವರಂತಹ ದೊಡ್ಡ ಬಂಡವಾಳ ಗಾರರನ್ನು ಪೋಷಿಸಲಾಗುತ್ತಿದೆ. ಗುಜ
ರಾತ್‌ನಲ್ಲಿ ಸರ್ದಾರ್ ಪಟೇಲ್ ಹೆಸರಿನಲ್ಲಿ ನಿರ್ಮಿಸಿದ್ದ ಕ್ರೀಡಾಂಗಣ ವನ್ನು ಮೋದಿ ತಮ್ಮ ಹೆಸರಿಗೆ ಬದ ಲಾಯಿಸಿ ಕೊಂಡಿದ್ದಾರೆ. ಕ್ರೀಡಾಂ ಗಣದಲ್ಲಿ ಅದಾನಿ, ಅಂಬಾನಿ ಸ್ಥಳಗಳನ್ನು ಗುರುತಿಸಿ ದೇಶದ ಜನರು ಹಾಗೂ ಕ್ರೀಡೆ ಯನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಸೈಯಿದ್ ಅಹಮದ್ ಆರೋಪಿಸಿದರು.

ಯುಪಿಎ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ ಲೀಟರ್‌ಗೆ ₹1 ಏರಿಕೆ ಯಾದರೂ ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಮುಖಂಡರು, ಈಗ ಒಂದೇ ಸಮನೆ ಇಂಧನ ಬೆಲೆ ಹೆಚ್ಚಾಗುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಇದು ಬಿಜೆಪಿಯ ಇಬ್ಬಗೆ ನೀತಿಯಾಗಿದೆ. ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ವಿಳಂಬವಾಗಿದ್ದರೂ ಯಾರು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್ ದೂರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಮುಖಂಡರಾದ ಮುರುಳೀಧರ ಹಾಲಪ್ಪ, ಎಚ್.ಸಿ.ಹನು ಮಂತಯ್ಯ, ಸಂಜೀವ್ ಕುಮಾರ್, ಶಿವಾಜಿ, ಥಾಮ್‍ಸನ್, ನಿಶಾ, ದಾದಾ ಪೀರ್, ಅಲ್ಲಾಉದ್ದಿನ್, ಮುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.