ಅಪಾರ್ಥ ಮಾಡಿಕೊಂಡಿರುವುದೇ ಹೆಚ್ಚು

6
ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಡಾ.ಎಸ್.ಬಾಲಾಜಿ ಹೇಳಿಕೆ

ಅಪಾರ್ಥ ಮಾಡಿಕೊಂಡಿರುವುದೇ ಹೆಚ್ಚು

Published:
Updated:
Deccan Herald

ತುಮಕೂರು: ಈಗಿನ ಯುವ ಸಮುದಾಯ ಗಾಂಧೀಜಿ ಅವರನ್ನು ತಿಳಿದುಕೊಂಡಿರುವುದಕ್ಕಿಂತ ಅಪಾರ್ಥ ಮಾಡಿಕೊಂಡಿರುವುದೇ ಹೆಚ್ಚು ಎಂದು ಪ್ರಾಧ್ಯಾಪಕ ಜಿ.ಎಂ.ಶ್ರಿನಿವಾಸಯ್ಯ ವಿಷಾದ ವ್ಯಕ್ತಪಡಿಸಿದರು.

ನಗರದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ತು ಹಾಗೂ ಸಿದ್ಧಾರ್ಥ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

’ಲಕ್ಷಾಂತರ ಜನರ ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತಿಲ್ಲ. ಕಟ್ಟುಪಾಡುಗಳಿಂದ ಹೊರಬರಲು ಪ್ರಯತ್ನಿಸುತ್ತಿಲ್ಲ’ ಎಂದು ಅವರು ಹೇಳಿದರು. 

ಉದ್ಘಾಟನಾ ಭಾಷಣ ಮಾಡಿದ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕಾರ್ಯಧ್ಯಕ್ಷ ಡಾ.ಎಸ್.ಬಾಲಾಜಿ, ಯುವಜನರು ಗಾಂಧೀಜಿ ಚಿಂತನೆಯನ್ನು ಓದಿ, ತಿಳಿದುಕೊಳ್ಳಬೇಕಿದೆ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಟಿ.ಎನ್.ಹರಿಪ್ರಸಾದ್‌ ಅವರು ’ಸ್ವಾತಂತ್ರ್ಯೋತ್ತರದಲ್ಲಿ ಗಾಂಧಿ’ ಕುರಿತು ಮಾತನಾಡಿ, ’ಸ್ವಾತಂತ್ರ್ಯೋತ್ತರದಲ್ಲಿ ಗಾಂಧಿ ಕೇವಲ ಐದೂವರೆ ತಿಂಗಳು ಮಾತ್ರ ಜೀವಿಸಿದ್ದರು ಎಂದರೆ ನಾವು ಎಂತಹ ಭಾರತದಲ್ಲಿ ಇದ್ದೇ ಎಂಬುದು ಆಶ್ಚರ್ಯವೆನಿಸುತ್ತದೆ. ಆದರೆ ಅವರ ಸಾಧನೆಗಳ ಮೂಲಕ ಇಂದಿಗೂ ಪ್ರಸ್ತುತವಾಗಿದ್ದಾರೆ’ ಎಂದು ಅಭಿ‍ಪ್ರಾಯಪಟ್ಟರು.

ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ ಎಲ್ ಗಂಗಾತನಯಸಿರಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎನ್.ವಿಜಯೇಂದ್ರ, ಪರಿಷತ್ತಿನ ಶಿರಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣ ಹೆಂದೊರೆ, ಕಜಾಪ ತುಮಕೂರು ತಾಲ್ಲೂಕು ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾಗರಾಜ್, ಮಂಜುಳಾ ರವಿ, ನಂದಿನಿ ಬ್ರಹ್ಮದೇವ, ಯಶೋಧ, ಡಾ.ಕೆ.ಎಸ್.ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !