ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ

Last Updated 7 ಮಾರ್ಚ್ 2023, 10:03 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘ಗಾಂಧೀಜಿ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ತಾಲ್ಲೂಕು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಂದೀಶ್ ಬಟ್ಲೇರಿ ಹೇಳಿದರು.

ಪಟ್ಟಣದ ನವೋದಯ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಡಿ ಆಯೋಜಿಸಿದ್ದ ದಿ.ಜಿ.ವಿ. ನಾರಾಯಣಮೂರ್ತಿ ದತ್ತಿ ಉಪನ್ಯಾಸದಲ್ಲಿ ‘ಗಾಂಧೀಜಿ ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಗಳು’ ಕುರಿತು ಅವರು ಮಾತನಾಡಿದರು.

ಗಾಂಧಿ ಅವರದ್ದು ಸರಳ ವ್ಯಕ್ತಿತ್ವ. ಅವರಲ್ಲಿದ್ದ ಮೌಲ್ಯಗಳು ಅವರನ್ನು ರಾಜಕೀಯ, ಆರ್ಥಿಕ ಚಿಂತಕರನ್ನಾಗಿ ರೂಪಿಸಿತು ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಕಸಾಪ ಆಧ್ಯಕ್ಷ ಎಂ.ಎಸ್. ರವಿಕುಮಾರ್, ಗಾಂಧಿವಾದಿಯಾದ ನಾರಾಯಣಮೂರ್ತಿ ಅವರ ಹೆಸರಲ್ಲಿ ದತ್ತಿ ಉಪನ್ಯಾಸ ಮಾಡುತ್ತಿರುವುದು ಸಂತಸ ವಿಷಯ. ವಿದ್ಯಾರ್ಥಿಗಳು ಗಾಂಧಿ ಕುರಿತು ಹೆಚ್ಚು ಅಧ್ಯಯನ ಮಾಡಬೇಕು. ಆಗ ಮಾತ್ರ ಅವರನ್ನು ಅರಿತುಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಸಾಪ ನಗರ ಘಟಕದ ಕೋಶಾಧ್ಯಕ್ಷ ನವೀನ್ ರಾವತ್, ‘ಇಂದು ಗಾಂಧಿ ಕುರಿತ ಉಪನ್ಯಾಸದ ಜೊತೆಗೆ ಅನುವಾದ ಸಾಹಿತ್ಯ ಕುರಿತು ಚರ್ಚೆ ನಡೆಯುತ್ತಿರುವುದು ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲತೆಗೆ ಕನ್ನಡಿ ಹಿಡಿದಿದೆ’ ಎಂದರು.

ಸಾಹಿತಿ ಎಂ.ವಿ. ನಾಗರಾಜರಾವ್ ಮಾತನಾಡಿ, ‘ನಾರಾಯಣಮೂರ್ತಿ ಅಪ್ಪಟ ಗಾಂಧಿವಾದಿಯಾಗಿದ್ದರು. ಮೌಲ್ಯಗಳನ್ನು ರೂಢಿಸಿಕೊಂಡು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಮಹತ್ವ ಪಡೆದ ಕಾರಣಕ್ಕೆ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ನಡೆಯುತ್ತಿದೆ’ ಎಂದು ಸ್ಮರಿಸಿದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಸಿ. ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT