ತೋವಿನಕೆರೆ: ಅಧುನಿಕ ಜೀವನ ಶೈಲಿಯಿಂದ ದೇಹ ಮತ್ತು ಮನಸ್ಸಿನ ನೆಮ್ಮದಿಗೆ ಭಂಗ ಬರುತ್ತಿದ್ದು, ಅನಿವಾರ್ಯವಾಗಿ ಪುರಾತನ ಗರಡಿ ಮನೆಯಂತಹ ಸಂಸ್ಕೃತಿಗೆ ಹಿಂದಿರುಗಬೇಕಿದೆ ಎಂದು ತರಬೇತುದಾರ ಡಿ.ಆರ್.ಚೇತನ್ ಅಭಿಪ್ರಾಯಪಟ್ಟರು.
ಸಮೀಪದ ಕೆಸ್ತೂರು ಗ್ರಾಮದ ನೇತಾಜಿ ಬ್ರಿಗೇಡ್‌ನವರು ಗಣಪತಿ ಪೆಂಡಾಲ್‌ನಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗರಡಿ ಮನೆಗಳ ಉಪಕರಣಗಳ ಉಪಯೋಗ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಗರಡಿ ಮನೆಗಳಲ್ಲಿ ಮಾಡುವ ಕಸರತ್ತುಗಳಿಂದ ನಮ್ಮ ದೇಹವನ್ನು ಉಹೆಗೂ ಮೀರಿ ಸದೃಢಗೊಳಿಸಿಕೊಂಡು ಆರೋಗ್ಯವಂತರಾಗಿ ಬದುಕಬಹುದು. ಈಗಲೂ ಬ್ರಿಟಿಷರು ಗರಡಿ ಮನೆಯ ಕಸರತ್ತನ್ನು ಅವರ ಸೈನಿಕರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಹಳ್ಳಿಸಿರಿ ಮಂಜಮ್ಮ ಹಲಸಿನ ಕಾಯಿ ಮತ್ತು ಹಣ್ಣಗಳ ಬಗ್ಗೆ ಮಾಹಿತಿ ನೀಡಿದರು.