ಧಾರ್ಮಿಕ ಜಾಗೃತಿ ಮೂಡಿಸಿದ ಗೋಂದಾವಲೇಕರ್‌

7
ಶೃಂಗೇರಿ ಶಂಕರ ಮಠದಲ್ಲಿ ನಡೆದ ಆರಾಧನಾ ಮಹೋತ್ಸವದಲ್ಲಿ ಡಾ.ಪಿ.ಆರ್‌.ರೇಣುಕ ಪ್ರಸಾದ್‌ ಅಭಿಪ್ರಾಯ

ಧಾರ್ಮಿಕ ಜಾಗೃತಿ ಮೂಡಿಸಿದ ಗೋಂದಾವಲೇಕರ್‌

Published:
Updated:
Prajavani

ತುಮಕೂರು: ರಾಮೋಪಾಸನೆ, ನಾಮಸ್ಮರಣೆ, ಗೋರಕ್ಷೆ ಮತ್ತು ಅನ್ನದಾನ ಸಂಗತಿಗಳ ಮೂಲಕ ಬ್ರಹ್ಮಜ್ಞಾನಿಗಳಾದ ಬ್ರಹ್ಮಚೈತನ್ಯ ಮಹಾರಾಜ್‌ ಗೋಂದಾವಲೇಕರ್‌ ಅವರು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದರು ಎಂದು ಪ್ರಾಧ್ಯಾಪಕ ಡಾ.ಪಿ.ಆರ್‌.ರೇಣುಕ ಪ್ರಸಾದ್‌ ತಿಳಿಸಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಸಮರ್ಥ ಸದ್ಗುರು ಬ್ರಹ್ಮಚೈತನ್ಯ ಟ್ರಸ್ಟ್‌ನಿಂದ ಆಯೋಜಿಸಿದ್ದ  ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೇಕರ್‌ ಅವರ 105 ನೇ ಆರಾಧನಾ ಮಹೋತ್ಸವ ಮತ್ತು ಸದ್ಗುರು ಬ್ರಹ್ಮಾನಂದ ಮಹಾರಾಜ್‌ ಅವರ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.

ಬ್ರಹ್ಮ ಎಂದರೆ ಸಕಲವನ್ನೂ ಒಳಗೊಂಡ ಅತಿದೊಡ್ಡ ವಸ್ತು. ಚೈತನ್ಯ ಎಂದರೆ ಚಲನಶಕ್ತಿಗೆ ಸಾಕ್ಷಿಭೂತವಾ
ದದ್ದು. ಅಂತಹ ಪ್ರಜ್ಞಾ ವಿಶೇಷವನ್ನು ಬ್ರಹ್ಮಚೈತನ್ಯರು ಹೊಂದಿದ್ದು, ಅವರು ನೀಡಿದ ಮಾರ್ಗದರ್ಶನವನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಆರ್.ನಾಗರಾಜರಾವ್, ಟ್ರಸ್ಟ್‌ ಅಧ್ಯಕ್ಷ ಎಚ್.ಕೆ.ಶ್ರೀನಿವಾಸ ಶರ್ಮ, ಶಂಕರ ಸೇವಾ ಸಮಿತಿ ಕಾರ್ಯದರ್ಶಿ ಸಂಪಿಗೆ ವೆಂಕಟನಾರಾಯಣ, ಸಂಗೀತ ವಿದ್ವಾನ್ ಬಾಲಕೃಷ್ಣ, ಪ್ರೊ.ಡಿ.ಕೆ.ಸುಬ್ರಹ್ಮಣ್ಯ, ಬಡಗನಾಡು ಸಂಘದ ಅಧ್ಯಕ್ಷ ಸೂರ್ಯನಾರಾಯಣ, ಮೀನಾಕ್ಷಿ ಹಾಗೂ ಶಾಮಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !