ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ವಿರುದ್ಧ ‘ಕೈ’ ಕಾರ್ಯಕರ್ತರ ಪ್ರತಿಭಟನೆ

Published 19 ಆಗಸ್ಟ್ 2024, 14:01 IST
Last Updated 19 ಆಗಸ್ಟ್ 2024, 14:01 IST
ಅಕ್ಷರ ಗಾತ್ರ

ಕೊರಟಗೆರೆ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಸ್.ಎಸ್.ಆರ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿ ಪ್ರಮುಖ ನಾಯಕರ ಪೋಟೊ ಇದ್ದ ಫ್ಲೆಕ್ಸ್‌ಗಳಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.

ರಾಜ್ಯಪಾಲರ ಈ ನಡೆ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ ನಡೆ. ಈ ಹಿಂದೆ ವಿವಿಧ ಪಕ್ಷಗಳ ಅನೇಕ ನಾಯಕರು ಬಹುದೊಡ್ಡ ಅಕ್ರಮದಲ್ಲಿ ಭಾಗಿಯಾಗಿ ಸರ್ಕಾರ ಹಾಗೂ ರಾಜ್ಯಕ್ಕೆ ಆರ್ಥಿಕ, ಸಾಮಾಜಿಕ ನಷ್ಟ ಉಂಟು ಮಾಡಿದ್ದಾರೆ. ಅಂತಹವರನ್ನು ತನಿಖೆಗೆ ಒಳಪಡಿಸುವುದನ್ನು ಬಿಟ್ಟು ಕೇವಲ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಮುಡಾ ನಿವೇಶನ ನೋಂದಣಿ ಮಾಡಿಕೊಂಡಿರುವುದನ್ನು ಮುಂದಿಟ್ಟುಕೊಂಡು ರಾಜ್ಯದ ಒಬ್ಬ ಅಹಿಂದ ಮುಖ್ಯಮಂತ್ರಿಯನ್ನು ತನಿಖೆಗೆ ಅನುಮತಿ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮೆಡಿಕಲ್ ಅಶ್ವತ್ಥ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಅಧ್ಯಕ್ಷ ಬೈರೇಶ್, ಮುಖಂಡರಾದ ಎ.ಡಿ.ಬಲರಾಮಯ್ಯ, ವಾಲೆಚಂದ್ರಯ್ಯ, ಎಚ್.ಕೆ.ಮಹಾಲಿಂಗಯ್ಯ, ಚಿಕ್ಕರಂಗಯ್ಯ, ಕೆ.ಆರ್.ಓಬಳರಾಜು, ಎಲ್.ರಾಜಣ್ಣ, ನಂದೀಶ್, ನಾಗರಾಜು, ವಿನಯ್ ಕುಮಾರ್, ಟಿ.ಡಿ.ಪ್ರಸನ್ನಕುಮಾರ್, ಜಿ.ಎಸ್.ರವಿಕುಮಾರ್, ಜಿ.ಕೆ.ಕುಮಾರ್, ಈಶ್ವರಪ್ಪ, ಕವಿತಾ, ಮೈಲಾರಪ್ಪ, ಕೆ.ವಿ.ಮಂಜುನಾಥ್, ನರಸಿಂಹಮೂರ್ತಿ, ನಾಗಭೂಷಣ್, ದೊಡ್ಡಯ್ಯ, ಬಸವರಾಜು, ಮಂಜುನಾಥ್, ಸುರೇಶ್, ಆನಂದ್, ರಂಗರಾಜು, ಕೋಕಿಲ ಸಂದೀಪ್, ಜಮೀರ್, ಮುಬಾರಕ್, ರಿಯಾಜ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT