ಶನಿವಾರ, ಜೂನ್ 19, 2021
22 °C
ಭಕ್ತಿ, ಭಾವದಿಂದ ಪಾಲ್ಗೊಂಡ ನೂರಾರು ಭಕ್ತರು

ಗುಬ್ಬಿ ಚನ್ನಬಸವೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಇತಿಹಾಸ ಪ್ರಸಿದ್ಧ ಗುಬ್ಬಿಯ ಗೋಸಲ ಚನ್ನಬಸವೇಶ್ವರ ಸ್ವಾಮಿ ರಥೋತ್ಸವವು ವೈಭವಯುತವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಂಗಳವಾರ ಮಧ್ಯಾಹ್ನ ನೆರವೇರಿತು.

ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಹಿರೇಮಠ ರಥೋತ್ಸವಕ್ಕೆ ಚಾಲನೆ ನೀಡಿದರು.

ತೊರೆ ಮಠದ ರಾಜಶೇಖರ ಸ್ವಾಮೀಜಿ, ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ಹಾಗೂ ದೊಡ್ಡಗುಣಿ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.

ಸುಡುಬಿಸಿಲಿನ ನಡುವೆಯೂ ಕೊರೊನಾವನ್ನು ಲೆಕ್ಕಿಸದೆಅಪಾರ ಭಕ್ತರು ಭಾಗವಹಿಸಿದ್ದರು.

ಭಕ್ತರು ಬಾಳೆಹಣ್ಣು ದವನವನ್ನು ಸ್ವಾಮಿಯವರ ತೇರಿಗೆ ಎಸೆಯುವುದರ ಮೂಲಕ ತಮ್ಮ ಹರಕೆ ತೀರಿಸಿದರು. ‘ಕೊರೊನಾ ತೊಲಗಲಿ, ಗುಬ್ಬಿಯಪ್ಪನ ಕೃಪೆ ಭಕ್ತರ ಮೇಲಿರಲಿ’ ಎಂದು ಭಕ್ತರು ಜೈಕಾರ ಹಾಕಿದರು.

ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರೂ, ಜನ ಜಂಗುಳಿಯ ನಡುವೆ ಕಳ್ಳರು ತಮ್ಮ ಕೈಚಳಕ ತೋರಿದ ಘಟನೆಗಳು ನಡೆದವು.

ಕೊರೊನಾ ನಿಯಮ ಅನುಸಾರ ಈ ಬಾರಿ ಪಾನಕ, ಫಲಹಾರಗಳ ವಿತರಣೆ ನಿಷೇಧಿಸಲಾಗಿತ್ತು. ಕೆಲವೆಡೆ ಮಾತ್ರ ಮಜ್ಜಿಗೆ ವಿತರಿಸಲಾಯಿತು. ರಥೋತ್ಸವದ ನಂತರ ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.