ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಗೆ ಸೋಂಕು

Last Updated 1 ಜುಲೈ 2020, 17:48 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9ಕ್ಕೇರಿದೆ. ಬುಧವಾರ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರ ಮನೆಗಳನ್ನು ಸೀಲ್‌ಡೌನ್ ಮಾಡಕಾಗಿದೆ. ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.

ಅಮೃತೂರು ಹೋಬಳಿಯ ಯಾಚನಹಳ್ಳಿಯ ದಂಪತಿಗೆ ಸೋಂಕು ಧೃಢಪಟ್ಟಿದೆ. ಪತ್ನಿ ರಾಷ್ಟ್ರೀಯ ಹೆದ್ದಾರಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಂದು ಪ್ರಕರಣದಲ್ಲಿ ಅಮೃತೂರು ಇಂದಿರಾನಗರದ ಅಂಗನವಾಡಿ ಕಾರ್ಯಕರ್ತೆಗೆ ಸೋಂಕು ತಗುಲಿದೆ. ಜಿನ್ನಾಗರ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್‌ ಸಂಪರ್ಕದಿಂದ ಸೋಂಕು ಬಂದಿರಬಹುದು ಎನ್ನಲಾಗಿದೆ.

ಅಮೃತೂರು ಹೋಬಳಿಯ ತಿಮ್ಮೇಗೌಡನ ಪಾಳ್ಯದ 60 ವರ್ಷದ ವ್ಯಕ್ತಿ ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆ ವ್ಯಕ್ತಿಯ ಗಂಟಲು ಸ್ರಾವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಬುಧವಾರ ಸೋಂಕು ದೃಢವಾಗಿದೆ. ಮಂಗಳವಾರವೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪತ್ನಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಹುಲಿಯೂರುದುರ್ಗ ಬಳಿಯ ತಾವರೆಕೆರೆ ಗ್ರಾಮದ ಕ್ವೌರಿಕ ಕೆಲಸ ಮಾಡುವ 34 ವರ್ಷದ ಮತ್ತು ಸೀಗೇಪಾಳ್ಯದ 33 ವರ್ಷದ ಎಂಜಿನಿರ್‌ಗೆ ಸೋಂಕು ತಗುಲಿದೆ. ಇನ್ನು ಮೂರು ಜನಕ್ಕೆ ಸೋಂಕು ದೃಢಪಟ್ಟಿದೆ. ಅವರ ವಿವರಗಳು ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT