ಹಸಿರು ಕರ್ನಾಟಕ ಆಂದೋಲನ ಜಾಗೃತಿ ಜಾಥಾ

7

ಹಸಿರು ಕರ್ನಾಟಕ ಆಂದೋಲನ ಜಾಗೃತಿ ಜಾಥಾ

Published:
Updated:
Deccan Herald

ತುಮಕೂರು: ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಹಸಿರು ಕರ್ನಾಟಕ ಆಂದೋಲನ ಜಾಗೃತಿ ಅಭಿಯಾನವನ್ನು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಚಾಲನೆ ನೀಡಿದರು.

ಈ ಜಾಥಾವು ನಗರದ ಟೌನ್ ಹಾಲ್ ವೃತ್ತದಿಂದ ತೆರಳಿ ಬಿ.ಎಚ್.ರಸ್ತೆ ಮೂಲಕ ಹಾದು ಮಹಾತ್ಮಗಾಂಧಿ ಕ್ರೀಡಾಂಗಣ ತಲುಪಿತು.

ಈ ವೇಳೆ ಮಾತನಾಡಿದ ಅನೀಸ್ ಕಣ್ಮಣಿ ಜಾಯ್, ಅರಣ್ಯ ಇಲಾಖೆ ಹಮ್ಮಿಕೊಂಡಿರುವ ಹಸಿರು ಕರ್ನಾಟಕ ಕಾರ್ಯಕ್ರಮದ ಬಗ್ಗೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಪರಿಸರ ಸಂರಕ್ಷಣೆ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಸತೀಶ್ ಬಾಬಾ ರೈ, ಮಧುಗಿರಿ ಉಪವಿಭಾಗ ಅರಣ್ಯಾಧಿಕಾರಿ ಚಂದ್ರಪ್ಪ, ತುಮಕೂರು ಉಪವಿಭಾಗದ ಸಹಾಯಕ ಅರಣ್ಯ ಅಧಿಕಾರಿ ಬಿ.ಎನ್.ಸತ್ಯನಾರಾಯಣ, ನಾಗರಾಜ್, ನಿರ್ಮಿತಿ ಕೇಂದ್ರದ ರಾಜಶೇಖರ್, ಕುಂದರನಹಳ್ಳಿ ರಮೇಶ್, ಮಹೇಶ್, ರಬ್ಬಾನಿ ಇದ್ದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !