ಕನ್ನಡ ನಾಮಫಲಕ ವಿಚಾರ ಮುಂದಿಟ್ಟುಕೊಂಡು ಕನ್ನಡಪರ ಸಂಘಟನೆಗಳ ಹೋರಾಟಗಾರರು ದಾಳಿ ಮಾಡುತ್ತಿರುವುದು ದ್ವೇಷವನ್ನು ಮತ್ತಷ್ಟು ಹೆಚ್ಚುತ್ತದೆ. ಇದರಿಂದ ಪ್ರೀತಿ ಹುಟ್ಟುವುದಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೋರಾಟಗಾರರ ವಿರುದ್ಧ ಚಾಟಿ ಬೀಸಿದರು. ಕನ್ನಡ ಉಳಿಸಲು ಪ್ರೀತಿಯ ಮನಸ್ಸಿನಿಂದ ಕೆಲಸ ಮಾಡಬೇಕು. ಪ್ರೀತಿ ಮೂಡುವಂತೆ ಮಾಡಿದರೆ ಅವರೇ ಕನ್ನಡ ಫಲಕಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದರು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಪ್ರೇಕ್ಷಕರ ಸಾಲಿನಿಂದ ಅಪಸ್ವರ ಕೇಳಿ ಬಂತು. ಇದೇ ವಿಚಾರ ಪ್ರಸ್ತಾಪಿಸಿದ ಕೆ.ಪಿ.ನಟರಾಜ್ ‘ಹಿಂದಿಯ ಆಕ್ರಮಣಕ್ಕೆ ಪ್ರತಿರೋಧವಷ್ಟೇ ವ್ಯಕ್ತವಾಗಿದೆ. ಕನ್ನಡದ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ’ ಎಂದು ಹೋರಾಟವನ್ನು ಸಮರ್ಥಿಸಿಕೊಂಡರು.