ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕೆಲಸ ಹೆತ್ತಮ್ಮನ ಸೇವೆಯಷ್ಟೇ ಪುನೀತ

ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 23 ನವೆಂಬರ್ 2022, 12:23 IST
ಅಕ್ಷರ ಗಾತ್ರ

ಪಟ್ಟನಾಯಕನಹಳ್ಳಿ: ‘ಕನ್ನಡದ ಕೆಲಸ ಹೆತ್ತಮ್ಮನ ಸೇವೆಯಷ್ಟೇ ಪುನೀತವಾದುದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ
ಹೇಳಿದರು.

ಇಲ್ಲಿನ ಶಾಂತಿನಿಕೇತನ ವಿದ್ಯಾಮಂದಿರದ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಗೌರವ ಪುರಸ್ಕಾರ ಹಾಗೂ ಅಪ್ಪು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ
ದರು.

ಪುನೀತ್ ರಾಜ್‍ಕುಮಾರ್ ತನ್ನ ತಂದೆಯ ಹಾದಿಯಲ್ಲಿ ಸಾಗಿದರು. ವಿನೀತರಾಗಿ ಪ್ರಚಾರದ ಹಪಾಹಪಿ ಬಯಸದೆ ಸೇವಾಧರ್ಮ ಪಾಲಿಸಿದರು. ಯುವ ಸಮೂಹಕ್ಕೆ ಯಾವ ರೀತಿಯ ಬದುಕು ಕಟ್ಟಿಕೊಳ್ಳಬೇಕೆಂದು ತಿಳಿಸಿದ್ದಾರೆ. ಪುನೀತ್ ಅಮರರಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಗಡಿನಾಡಿನಲ್ಲಿ ಕನ್ನಡದ ಕಂಪು ಇನ್ನಿಲ್ಲದಂತೆ ಪೋಷಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ. ಕನ್ನಡವನ್ನು ಪ್ರೀತಿಯಿಂದ ಬಳಸಿ ನಮ್ಮತನ ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪತ್ರಿಕೋದ್ಯಮಿ ಎಸ್. ನಾಗಣ್ಣ, ಬಿಬಿಎಂಪಿ ಸಹಾಯಕ ಆಯುಕ್ತ ಡಾ.ಕೆ. ನಾಗಣ್ಣ, ಗಾಯಕಿ ಶಮಿತಾ ಮಲ್ನಾಡ್, ಕಸಾಪ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ, ನಾದೂರು ಗ್ರಾ.ಪಂ. ಅಧ್ಯಕ್ಷೆ ಮೆಹರ್ ತಾಜ್ ಬಾಬು, ನಿವೃತ್ತ ಪ್ರಾಂಶುಪಾಲ ಗೋವಿಂದಪ್ಪ, ಡಿ.ಆರ್. ಪರಮೇಶ್ ಗೌಡ, ಪ.ನಾ. ಹಳ್ಳಿ ಹರೀಶ್, ಟಿ.ಎ. ವಿಜಯಕುಮಾರ್, ರೂಪೇಶ್, ಪಿ.ಎಂ. ಕಾಗಿಣಕರ್, ಜಿಲ್ಲಾ ಕಸಾಪ ಕಾರ್ಯದರ್ಶಿ ಮಹದೇವಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT