ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಬಸವರಾಜು ಅವರನ್ನು ಬಿಜೆಪಿಯಿಂದ ದೂರವಿಡಿ: ಕಾರ್ಯಕರ್ತರ ಆಗ್ರಹ

Published 10 ಮಾರ್ಚ್ 2024, 16:13 IST
Last Updated 10 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ಹಾಗಲವಾಡಿ: ಸಂಸದ ಜಿ.ಎಸ್. ಬಸವರಾಜು ಅವರ ಸಾಧನೆ ಶೂನ್ಯ. ಅವರು ಹೇಳಿದಂತೆ ಕೇಳಿ ವಿ. ಸೋಮಣ್ಣಗೆ ಲೋಕಸಭೆ ಚುನಾವಣೆ ಬಿಜೆಪಿ ಟಿಕೆಟ್ ನೀಡಬಾರದು. ರೈತರ ಪರವಿರುವ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಕ್ಷೇತ್ರದಲ್ಲಿ ವಿ.ಸೋಮಣ್ಣಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಸೋಲು ಖಚಿತ ಎಂದರು.

ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡಲು ಸಂಸದ ಜಿ.ಎಸ್‌ ಬಸವರಾಜು ಅವರ ವಿರೋಧವಿದೆ. ಆದರೆ ಬಸವರಾಜು ಅವರು ಅವಕಾಶವಾದಿ ರಾಜಕಾರಣಿ. ಅವರ ಮಗನನ್ನು ಗೆಲ್ಲಿಸಲು ಜಿಲ್ಲೆಯ ಯಾವ ಯಾವ ರಾಜಕಾರಣಿಗಳ ಜೊತೆ ಮೈತ್ರಿ ಮಾಡಿಕೊಂಡಿದ್ದರು ಎನ್ನುವುದು ಜನರಿಗೆ ತಿಳಿದಿದೆ. ಈಗ ಯಾರನ್ನು ಗೆಲ್ಲಿಸಲು ಬಿಜೆಪಿಯ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹೊರಟಿದ್ದಾರೆ ಎನ್ನುವುದೂ ತಿಳಿದಿದೆ. ಅವರನ್ನು ಪಕ್ಷದಿಂದಲೇ ದೂರವಿಡಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಬಿಜೆಪಿ ನಾಶವಾಗುತ್ತದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.

ಗುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದರ್ಶನ್, ಲೋಕೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಯಾನಂದ್, ಗ್ರಾಮ ಪಂಚಾಯಿತಿ ಮಾಜಿ ಸದ್ಯಸ್ಯ ಶಿವಸ್ವಾಮಿ ಮುಖಂಡರಾದ ಚಂದ್ರಕಾಂತ್, ಗುರುಪಾದಪ್ಪ, ರಾಜಣ್ಣ,‌ ಚೇತನ್ ಬಾಬು, ಶರತ್, ದಿಲೀಪ್, ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT