ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಾಲಾ ಕಾಮಗಾರಿ ನಿಲ್ಲಿಸಿದ್ದೇಕೆ? .ದೇವೇಗೌಡರು ಉತ್ತರಿಸಲಿ

ಹೇಮಾವತಿ ನೀರಿನ ವಿಷಯದಲ್ಲಿ ಅಭಿವೃದ್ಧಿ ಫೋರಂ ಎತ್ತಿದ 12 ಪ್ರಶ್ನೆ, ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಸವಾಲು
Last Updated 2 ಮೇ 2019, 10:49 IST
ಅಕ್ಷರ ಗಾತ್ರ

ತುಮಕೂರು: ದೇವೇಗೌಡರು ಮುಖ್ಯಮಂತ್ರಿ ಆದ ತಕ್ಷಣ ತುಮಕೂರು ಹೇಮಾವತಿ ನಾಲಾ ವಲಯ ಕಾಮಗಾರಿ ನಿಲ್ಲಿಸಿದ್ದೇಕೆ? ತುಮಕೂರಿಗೆ ನೀರು ಕೊಡಲು ಕೆಲಸ ಮಾಡಿದ ಆಗಿನ ಹೇಮಾವತಿ ಮುಖ್ಯ ಎಂಜಿನಿಯರ್ ರತ್ನ ನಾಯಕ್ ಅವರನ್ನು ಅಮಾನತ್ತು ಮಾಡಿದ್ದೇಕೆ? ಎಂಬುದು ಸೇರಿದಂತೆ ಹನ್ನೆರಡು ಪ್ರಶ್ನೆಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಉತ್ತರಿಸಬೇಕು ಎಂದು ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇವೇಗೌಡರು ಮುಖ್ಯಮಂತ್ರಿ ಆದ ಬಳಿಕ ತುಮಕೂರು ನಾಲೆಗೆ ಮಣ್ಣು ಸುರಿಸಿ ಪ್ರತಿಭಟನೆಎ ನಡೆಸಿದ್ದು ಯಾರು? ಹಾಸನಕ್ಕೆ 17 ಟಿಎಂಸಿ ನೀರು ನಿಗದಿ ಆಗಿದ್ದರೂ 40 ಟಿಎಂಸಿ ನೀರು ಬಳಕೆ ಏಕೆ? ಸುಪ್ರೀಂ ಕೋರ್ಟ್‌ 2013ರ ಮೇ 10ರಂದು ನೀಡಿದ ಆದೇಶದ ಅನ್ವಯ ಕೇಂದ್ರ ಸರ್ಕಾರ ಕಾವೇರಿ ಮೇಲುಸ್ತುವಾರಿ ಸಮಿತಿ ರಚಿಸುವುದಕ್ಕೆ ವಿರೋಧ ಮಾಡುತ್ತಿರುವುದು ಹಾಸನದಲ್ಲಿ ಕದ್ದು ಬಳಸುತ್ತಿರುವ ಹೇಮಾವತಿ ನೀರಿಗೋಸ್ಕರ ಅಲ್ಲವೇ ಎಂಬುದನ್ನು ದೇವೇಗೌಡರು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

‘ತುಮಕೂರು ಶಾಖಾ ನಾಲೆಯ್ನು 4 ಸಾವಿರ ಕ್ಯುಸೆಕ್ ವಿಸ್ತರಿಸಲು ಸಾಧ್ಯವಿದ್ದರೂ ರಾಮನಗರಕ್ಕೆ ಎಕ್ಸಪ್ರೆಸ್ ಕೆನಾಲ್ ಏಕೆ? ತುಮಕೂರು ಜಿಲ್ಲೆಯ ಜನರಿಗೆ ಮರಣ ಶಾಸನ ಬರೆಯುವ ಹಾಸನದಿಂದ ನೇರವಾಗಿ ರಾಮನಗರಕ್ಕೆ ಹೇಮಾವತಿ ನೀರು ಕೊಡಲು ಮುಂದಾಗಿರುವ ಹೇಮಾವತಿ ಎಕ್ಸಪ್ರೆಸ್ ಕೆನಾಲ್ ಬಗ್ಗೆ ದೇವೇಗೌಡರು ಯಾಕೆ ಮೌನವಹಿಸಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಅಲ್ಲದೇ ತುಮಕೂರಿಗೆ 24 ಟಿಎಂಸಿ ನೀರು ನಿಗದಿಯಾಗಿದ್ದರೂ ನಿಗದಿತ ನೀರು ಬಿಡುತ್ತಿಲ್ಲ ಏಕೆ?’ ಎಂದು ಕುಂದರನಹಳ್ಳಿ ಪ್ರಶ್ನಿಸಿದರು.

‘ಪ್ರತಿ ವರ್ಷ ತುಮಕೂರಿಗೆ ಹೇಮಾವತಿ ನೀರು ಬಿಟ್ಡಾಗ ತುಮಕೂರು ನಾಲಾ ಒಡೆಯುವುದು ಏಕೆ? ನಾಲೆ ಒಡೆಯಲು ಕಾರಣರಾದ ಎಂಜಿನಿಯರ್‌ಗಳ ಮೇಲೆ ಏನು ಕ್ರಮ ಕೈಗೊಳ್ಳಾಗಿದೆ. ಹೇಮಾವತಿ ನಾಲೆಯ ಎಲ್ಲಾ ವಿತರಣಾ ಕಾಲುವೆಗೆ ‘ಸ್ವಯಂ ಚಾಲಿತ ನೀರುಮಾಪನ ಮೀಟರ್’ (ಆಟೋ ಮ್ಯಾಟಿಕ್) ಅಳವಡಿಸಲು ಏಕೆ ಆಗಿಲ್ಲ ಎಂಬುದನ್ನು ಜಿಲ್ಲೆಯ ಜನರಿಗೆ ತಿಳಿಸಿಕೊಡಬೇಕು’ ಎಂದು ಆಗ್ರಹಿಸಿದರು.

‘23.52 ಟಿಎಂಸಿ ನೀರು ಕೊಟ್ಟರೆ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸಬಹುದು. ಅವರ ಪುತ್ರನೇ ರಾಜ್ಯದ ಮುಖ್ಯಮಂತ್ರಿ ಆಗಿರುವುದರಿಂದ ಎಲ್ಲ ಕೆರೆಗಳನ್ನು ತುಂಬಿಸುವಂತೆ ಸರ್ಕಾರಿ ಆದೇಶ ಹೊರಡಿಸುತ್ತೇನೆ ಎಂದು ಜಿಲ್ಲೆಯ ಜನರಿಗೆ ಭರವಸೆ ನೀಡುತ್ತಾರೆಯೇ. ಮಳೆಗಾಲದಲ್ಲಿ ಸುಮಾರು 5ರಿಂದ 100 ಟಿಎಂಸಿಯಷ್ಟು ಸಮುದ್ರ ಸೇರುವ ಹೇಮಾವತಿ ಪ್ರವಾಹದ ನೀರನ್ನು ( flood flow) ಬಳಸಲು ಏಕೆ ಈವರೆಗೆ ದೇವೇಗೌಡರು ಒತ್ತಾಯಿಸುತ್ತಿಲ್ಲ. ಈ ನೀರನ್ನು ಪಡೆಯುವುದಕ್ಕಾಗಿಯೇ ತುಮಕೂರು ಜಿಲ್ಲೆಯ ಜನರು ದಶಕದಿಂದ ಹೋರಾಟ ಮಾಡುತ್ತಿದ್ದಾರೆ. ಆದಾಗ್ಯೂ ಈವರೆಗೂ ದೇವೇಗೌಡರು ಮೌನವಹಿಸಿದ್ದು ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT