ಗುರುವಾರ , ಜುಲೈ 7, 2022
23 °C
ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದ ಶಂಕರಪ್ಪ* ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗಿದ್ದ ಮದುವೆ

20 ವಯಸ್ಸಿನ ಯುವತಿ ಮದುವೆಯಾಗಿದ್ದ 45ರ ಅಂಕಲ್‌ ಶಂಕರಪ್ಪ ಸೂಸೈಡ್‌ಗೆ ಕಾರಣ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್ (ತುಮಕೂರು ಜಿಲ್ಲೆ): ಕೆಲವು ತಿಂಗಳ ಹಿಂದೆ ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ಹುಲಿಯೂರುದುರ್ಗ ಹೋಬಳಿ ಅಕ್ಕಿಮರಿಪಾಳ್ಯದ ಶಂಕರಪ್ಪ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

45 ವರ್ಷ ವಯಸ್ಸಿನ ಶಂಕರಪ್ಪ ಅವರ ಶವ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಸೆಪ್ಟಂಬರ್‌ನಲ್ಲಿ ಸಂತೆಮಾವತ್ತೂರಿನ ಮೇಘನಾ ಎಂಬ 20 ವರ್ಷದ ಯುವತಿಯನ್ನು ಅವರು ಮದುವೆಯಾಗಿದ್ದರು. ವಯಸ್ಸಿನ ಅಂತರದಿಂದಾಗಿ ಈ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು. ಶಂಕರಪ್ಪ ಅವರನ್ನು ‘ಅಂಕಲ್‌ ಶಂಕರಪ್ಪ’ ಎಂದು ಟ್ರೋಲ್‌ ಮಾಡಲಾಗಿತ್ತು.

ತಾಯಿ ಮತ್ತು ಹೆಂಡತಿಯ ನಡುವಿನ ಕಿತ್ತಾಟಕ್ಕೆ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.‘ಸೊಸೆ ಮೇಘನಾ ಹಲವು ದಿನಗಳಿಂದ ಮಗನೊಂದಿಗೆ ಜಗಳವಾಡುತ್ತಿದಳು’ ಎಂದು ಶಂಕರಪ್ಪ ಅವರ ತಾಯಿ ರಂಗಮ್ಮ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಂಕರಪ್ಪ ಪತ್ನಿ ಮೇಘನಾ ಸಹ ಪೊಲೀಸರಿಗೆ ದೂರು ನೀಡಿದ್ದಾರೆ. ಹುಲಿಯೂರುದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು