ಮಂಗಳವಾರ, ಸೆಪ್ಟೆಂಬರ್ 28, 2021
25 °C

ಮಾರ್ಗದರ್ಶನ ಕೊರತೆ; ಗುರಿಗೆ ಅಡ್ಡಿ: ಡಾ.ವಿ.ಟಿ.ಶಿವಣ್ಣ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ದೇಶದ ಬಹಳಷ್ಟು ಜನಕ್ಕೆ ಇರುವ ಬಹುದೊಡ್ಡ ಕೊರತೆ ಎಂದರೆ ಮಾರ್ಗದರ್ಶನ. ಸರಿಯಾದ ಮಾರ್ಗದಲ್ಲಿ ಸಾಗಿದರೆ ಗುರಿ ಮುಟ್ಟಬಹುದು ಎಂದು ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ವಿ.ಟಿ.ಶಿವಣ್ಣ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಫೋರ್ಸ್ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಮಾರ್ಗದರ್ಶಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಭವಿಷ್ಯ ರೂಪಿಸಿಕೊಳ್ಳಲು ಸರಿಯಾದ ಗುರಿ ಇರಬೇಕು. ಪ್ರತಿಯೊಬ್ಬರ ಜೀವನದಲ್ಲೂ ಕಾಡುವಂತಹ ಒಂದು ಪ್ರಶ್ನೆ, ಒಂದು ಪದ ಎಂದರೆ ‘ಮುಂದೇನು?’ ಇದೊಂದು ಚಿಕ್ಕ ಪದವಲ್ಲ. ಮುಂದೇನು ಎಂಬ ಗುರಿಯನ್ನು ನಿರ್ಧರಿಸಿ ಹೊರಟರೆ ಯಶಸ್ಸು ಸಿಗಲಿದೆ ಎಂದು ಸಲಹೆ ಮಾಡಿದರು.

ಕುಣಿಗಲ್ ವಿಜಯ ಪದವಿಪೂರ್ವ ಕಾಲೇಜು ಉಪನ್ಯಾಸಕ ದಯಾನಂದ ಕುದೂರು, ‘ಪರಿಶ್ರಮದಿಂದ ಅಂಕ ಗಳಿಸಿ ಬೆಳೆಯುವಂತಹ ವ್ಯಕ್ತಿ ಮುಂದೊಂದು ದಿನ ಮಹತ್ವಪೂರ್ಣ ಜೀವನ ಕೌಶಲಗಳನ್ನು ಬೆಳೆಸಿಕೊಂಡು ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇನ್ನೊಬ್ಬರು ಬಂದು ನಮ್ಮನ್ನು ಬೆಳೆಸುತ್ತಾರೆ, ನಮ್ಮ ಕೈಹಿಡಿದು ನಡೆಸುತ್ತಾರೆ, ಮುಂದೆ ಕರೆದುಕೊಂಡು ಹೋಗುತ್ತಾರೆ ಎಂಬ ಭಾವನೆ ಮೂಡಿದರೆ ತೆವಳಲು ಆಗದಂತಹ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಜಗತ್ತಿನ ಅತ್ಯಂತ ದೊಡ್ಡ ಮರ ಕಿಂಗ್ ಶರ್ಫನ್ ಆಗಬೇಕೋ ಅಥವಾ ಬೋನ್ಸಾಯ್ ಗಿಡಗಳಾಗಿ ಬೆಳೆಯಬೇಕೋ ಎಂಬುದನ್ನು ನೀವೇ ನಿರ್ಧಾರ ಮಾಡಿಕೊಳ್ಳಿ ಎಂದರು.

ಖಜಾನೆ ಇಲಾಖೆ ನೌಕರ ಕೆ.ಎಂ.ಮಂಜುನಾಥ್, ‘ಮತ್ತೊಬ್ಬರು ಹೇಳಿದ್ದಾಗಲಿ, ಇನ್ನೊಂದು ಕಡೆ ಕೇಳಿದ್ದಾಗಲಿ ಮಾಡುವುದಲ್ಲ. ಇದು ನನ್ನ ಸಾಮರ್ಥ್ಯ, ಇದನ್ನು ಮಾಡಿಯೇ ತೀರುತ್ತೇನೆ ಎಂಬ ಅಚಲ ಮನೋಭಾವ ಬರಬೇಕು’ ಎಂದು ಹೇಳಿದರು.

ನಿವೃತ್ತರಾದ ಗೂಳಹರಿವೆ ಪ್ರೌಢಶಾಲೆ ಮುಖ್ಯ ಶಿಕ್ಷಕ ರೇಣುಕಯ್ಯ, ಸೀತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಹನುಮಂತಯ್ಯ ಅವರನ್ನು ಗೌರವಿಸಲಾಯಿತು.

ಕಟ್ಟೆ ಯಜಮಾನರಾದ ಹನುಮಂತರಾಜು, ಸಮುದಾಯದ ಮುಖಂಡರಾದ ಕುಂಭಯ್ಯ, ಕುಂಬಿ ನರಸಯ್ಯ, ಪ್ರೆಸ್ ರಾಜಣ್ಣ, ವಕೀಲರಾದ ನಾರಾಯಣಸ್ವಾಮಿ, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್, ಅಗ್ನಿಬನ್ನಿರಾಯ ತಿಗಳ ಮಹಾಸಭಾ ಅಧ್ಯಕ್ಷ ಆಂಜಿನಪ್ಪ, ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆ ಅಧ್ಯಕ್ಷ ಕೆ.ಆರ್.ಮಾರುತಿ, ಕಾರ್ಯದರ್ಶಿ ಎಚ್.ಆರ್.ಮಂಜುನಾಥ್, ಪದಾಧಿಕಾರಿಗಳಾದ ಮಧು ಸೂದನ್, ಗೋವಿಂದ ಕೆ.ಹುಲಿಕಲ್, ಹೆಬ್ಬಾಕ ಲೋಕೇಶ್, ಸತೀಶ್, ವಿಜಯ್ ಕುಮಾರ್, ರವಿ ನರಸೀಪುರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು