ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಚಿಂತನೆಯ ನಾಯಕತ್ವ ಕೊರತೆ: ಡಾ.ಜಿ.ಪರಮೇಶ್ವರ್

ಸಿದ್ದನಹಳ್ಳಿ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದ ಅಭಿವೃದ್ಧಿಗೆ ಚಾಲನೆ
Last Updated 9 ಫೆಬ್ರುವರಿ 2021, 2:05 IST
ಅಕ್ಷರ ಗಾತ್ರ

ಮಧುಗಿರಿ: ‘ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದ ಅಭಿವೃದ್ಧಿಗೆ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ₹ 1 ಕೋಟಿ ಹಣವನ್ನು ಸರ್ಕಾರದ ವತಿಯಿಂದ ಮಂಜೂರು ಮಾಡಿಸಿದ್ದಾರೆ’ ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

ತಾಲ್ಲೂಕಿನ ಪುರವರ ಹೋಬಳಿಯ ಸಿದ್ದನಹಳ್ಳಿ ಗ್ರಾಮದಲ್ಲಿ ರಸ್ತೆ, ಚರಂಡಿ ಹಾಗೂ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಕೃಷಿ ಪ್ರಧಾನ ದೇಶವನ್ನು ಉದ್ಯಮ ಪ್ರಧಾನ ದೇಶ ಮಾಡಲು ಕೆಲವರು ಮುಂದಾಗಿದ್ದಾರೆ. ಇದು ಅತಂಕದ ವಿಷಯವಾಗಿದೆ. ಸಮಗ್ರವಾಗಿ ಅಭಿವೃದ್ಧಿ ಚಿಂತನೆ ಮಾಡುವ ನಾಯಕತ್ವದ ಕೊರತೆ ನಮ್ಮಲಿದೆ’ ಎಂದರು.

ಪ್ರಜಾಪ್ರಭುತ್ವದಲ್ಲಿ ಗೆಲ್ಲುವವರೆಗೂ ಮಾತ್ರ ಪಕ್ಷ ಇರಬೇಕು. ಗೆದ್ದ ನಂತರ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎಂದು ತಿಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಹಾಗೂ ವಿರೋಧವನ್ನು ಎದುರಿಸಿದಾಗ ಮಾತ್ರ ಸಮರ್ಥ ನಾಯಕತ್ವ ಬೆಳೆಯುತ್ತದೆ ಎಂದರು.

ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಗ್ರಾಮದ ಅಭಿವೃದ್ಧಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೈ ಜೋಡಿಸಿದ್ದಾರೆ ಎಂದರು. ಈ ಸಮುದಾಯ ಭವನಕ್ಕೆ ರಾಜಲಕ್ಷ್ಮಿ ರಾಮಚಂದ್ರಪ್ಪ ನಾಮಕರಣ ಮಾಡಲಾಗುವುದು ಹಾಗೂ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗುವುದು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಮಾತನಾಡಿ ಎಲ್ಲಾ ಗ್ರಾ.ಪಂಗಳಿಗೂ ತಲಾ 100 ಮನೆ ಮಂಜೂರು ಮಾಡಿಸುತ್ತೇನೆ ಎಂದರು.

ಕ್ಷೇತ್ರದ 36 ಗ್ರಾಮ ಪಂಚಾಯಿತಿಗಳ ಪೈಕಿ 30 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿದಿದ್ದು, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ ಅಭಿವೃದ್ಧಿ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು ಎಂದರು.

ಕೆಪಿಸಿಸಿ ಸದಸ್ಯ ದಿನೇಶ್, ತಾ.ಪಂ.ಇ.ಒ ದೊಡ್ಡಸಿದ್ದಯ್ಯ, ಕೆಐಅರ್‌ಡಿಎಲ್ ಎಇಇ ನಾಗಯ್ಯ, ಗೊಂದಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ಎಂ.ಸಿ ರಮ್ಯಾ, ಉಪಾಧ್ಯಕ್ಷೆ ನಾಗಮಣಿ, ಪುರವರ ಗ್ರಾ.ಪಂ ಅಧ್ಯಕ್ಷೆ ಅಂಬಿಕಾ, ಕೊರಟಗೆರೆ ತಾ.ಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಸದಸ್ಯರಾದ ಸಂಕಾಪುರದಿ ಲೀಪು, ಸೌಭಾಗ್ಯ, ನಟ ಹನುಮಂತೇಗೌಡ, ಗುತ್ತಿಗೆದಾರ ಎಸ್. ರೇಣುಕಾಪ್ರಸಾದ್, ಕೆ.ಎಸ್.ದ್ವಾರಕನಾಥ್, ಹನುಮಂತೇಗೌಡ, ಎಂ.ಜಿ ಶ್ರೀನಿವಾಸಮೂರ್ತಿ, ಬಿ.ವಿ.ನಾಗರಾಜಪ್ಪ, ಅಶ್ವತ್‌, ರಮಾಬಾಯಿ, ಮೂರ್ತಿ, ಚಂದ್ರಶೇಖರ್, ಶಿವಶಂಕರರೆಡ್ಡಿ, ಶಿವರುದ್ರಪ್ಪ, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT