ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಲಾರಿ ಹರಿದು ಚೆಕ್‌ಪೋಸ್ಟ್‌ ಧ್ವಂಸ

Last Updated 8 ಮೇ 2020, 10:16 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಮುಂಜಾನೆ ಅತಿ ವೇಗದಿಂದ ಬಂದ ಲಾರಿ ರಸ್ತೆಯಲ್ಲಿದ್ದ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದು ಚಕ್‌ಪೋಸ್ಟ್ ಮೇಲೆ ಹರಿದಿದೆ. ನಂತರ ಎದುರಿಗೆ ಬರುತ್ತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐದು ಜನರು ತೀವ್ರ ಗಾಯಗೊಂಡಿದ್ದಾರೆ.

ಲಾರಿ ಚಾಲಕ ನವೀನ್, ಕ್ಲೀನರ್ ಪ್ರವೀಣ್, ಪುಟ್ಟರಾಜು, ಕ್ಯಾಂಟರ್ ಚಾಲಕ ಕಿರಣ್‌ನ ಕಾಲುಗಳು ಮುರಿದಿವೆ. ಚಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

ಪಾನಮತ್ತನಾಗಿದ್ದ ಚಾಲಕ ನವೀನ್, ಹಾಸನ ಕಡೆಯಿಂದ ಲಾರಿಯನ್ನು ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದು ನಿಯಂತ್ರಿಸಲಾಗದೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ನಂತರ ಎಡೆಯೂರಿನ ಚಕ್ ಪೋಸ್ಟ್‌ ಮೇಲೆ ಹರಿದಿದೆ. ಸದ್ದು ಕೇಳಿದ ಸಿಬ್ಬಂದಿ ಚಕ್‌ಪೋಸ್ಟ್‌ನಿಂದ ಹೊರಬಂದಿದ್ದಾರೆ

ಚೆಕ್‌ಪೋಸ್ಟ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾ, ಕಂಪ್ಯೂಟರ್‌, ಯುಪಿಎಸ್‌ ಸೇರಿದಂತೆ ಅಂದಾಜು ₹ 1 ಲಕ್ಷ ಮೌಲ್ಯದ ವಸ್ತುಗಳು ಹಾಳಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ವಿಶ್ವನಾಥ್, ಡಿವೈಎಸ್ಪಿ ಜಗದೀಶ್, ಸಿಪಿಐ ನಿರಂಜನ್ ಕುಮಾರ್ ಭೇಟಿ ನೀಡಿದ್ದರು. ಅಮೃತೂರು ಪಿಎಸ್ಐ ಮಂಜು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT