ಗುಬ್ಬಿ: ಕಸಬಾ ಹೋಬಳಿ ಮಡೇನಹಳ್ಳಿಯಲ್ಲಿ ಮಂಗಳವಾರ ಚಿರತೆ ದಾಳಿ ನಡೆಸಿ ಜಮೀನಿನಲ್ಲಿ ಮೇಯುತಿದ್ದ ಕುರಿಯನ್ನು ಸಾಯಿಸಿದೆ.
ಗ್ರಾಮದ ತುರಿಯಪ್ಪ ಸಾಕಿದ್ದ ಒಂದು ಕುರಿಯನ್ನು ಹೊಲದಲ್ಲಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಪೊದೆಯಿಂದ ಏಕಾಏಕಿ ದಾಳಿ ನಡೆಸಿದ ಚಿರತೆ ಕುರಿಯನ್ನು ಕೊಂದಿದೆ.
ತುರಿಯಪ್ಪ ಕೂಗಾಟ ನಡೆಸಿದ್ದರಿಂದ ಅಕ್ಕಪಕ್ಕದವರು ಸೇರುವುದರೊಳಗೆ ಚಿರತೆ ಪೊದೆಯಲ್ಲಿ ಕಣ್ಮರೆಯಾಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.