ಬುಧವಾರ, ಸೆಪ್ಟೆಂಬರ್ 30, 2020
23 °C

ಚಿರತೆ ಹಾವಳಿ ತಡೆಯಲು ಹಲವು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ತಾಲ್ಲೂಕಿನ ಕಾರಮರಡಿ ಹಾಗೂ ಗರಣಿ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಜಿ.ವಿಶ್ವನಾಥ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರು ಭಯಭೀತರಾಗುವುದು
ಬೇಡ. ಅರಣ್ಯ ಇಲಾಖೆಯ ಅಧಿಕಾರಿಗಳು ನಿತ್ಯ ಗಸ್ತಿನಲ್ಲಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.

ವಲಯ ಅರಣ್ಯಾಧಿಕಾರಿ ವಾಸದೇವಮೂರ್ತಿ ಮಾತನಾಡಿ, ಕಾರಮರಡಿ ಗ್ರಾಮದ ಬೆಟ್ಟದಲ್ಲಿ 5 ಚಿರತೆಗಳು ವಾಸವಾಗಿರುವ ಮಾಹಿತಿ ಇದೆ. ಅವುಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಈ ಗ್ರಾಮಗಳಲ್ಲಿ ಚಿರತೆ ಬಗ್ಗೆ
ಅರಿವು ಮೂಡಿಸಲಾಗುವುದು.

ಚಿರತೆ ಗಳನ್ನು ಸೆರೆ ಹಿಡಿಯಲು ಬೋನ್‌ಗಳನ್ನು ಇಡಲಾಗುವುದು. ಗ್ರಾಮಸ್ಥರು ಮನೆಯ ಮುಂಭಾಗ ರಾತ್ರಿ ಸಮಯದಲ್ಲಿ ಬುರುಡೆ ಲೈಟ್‌ಗಳನ್ನು ಹಾಕಿ ಎಂದು ಮನವಿ ಮಾಡಿದರು.

ಆಹಾರ ಶಿರಸ್ತೇದಾರ್ ಗಣೇಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.