ತುಮಕೂರು: ಪ್ರೇಯಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಲೋಹಿತ್ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ ವಿಧಿಸಿದೆ.

ಬೆಂಗಳೂರಿನ ಕಮಲಾ ನಗರದ ಲೋಹಿತ್ ಮತ್ತು ಅರ್ಪಿತಾ ಪರಸ್ಪರ ಪ್ರೀತಿಸುತ್ತಿದ್ದರು. ಒಟ್ಟಿಗೆ ವಾಸವಿದ್ದರು. ಕೆಲ ದಿನಗಳ ನಂತರ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು. ಇದೇ ಸಮಯದಲ್ಲಿ ಅರ್ಪಿತಾ ಸಹೋದರ ಸಾಗರ ಮತ್ತು ಇತರರು ಲೋಹಿತ್ ಮೇಲೆ ಹಲ್ಲೆ ನಡೆಸಿದ್ದರು.

2019ರ ಫೆ. 2ರಂದು ಸಂಜೆ 5 ಗಂಟೆಗೆ ಲೋಹಿತ್, ಯಶವಂತಪುರದಿಂದ ಅರ್ಪಿತಾರನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ಇಬ್ಬರು ಬೆಂಗಳೂರಿನ ವಿವಿಧೆಡೆ ಸುತ್ತಾಡಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಕುಣಿಗಲ್ ಕಡೆಗೆ ತೆರಳಿದ್ದರು. ಸಂತೆಮಾವತ್ತೂರು– ಅಮೃತೂರು ಬಳಿ ಬೈಕ್ನಿಂದ ಅರ್ಪಿತಾರನ್ನು ಕೆಳಗೆ ಬೀಳಿಸಿ ಹಲ್ಲೆ ನಡೆಸಿದ್ದ. ಉಸಿರು ಗಟ್ಟಿಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ. ನಂತರ ತಿಪಟೂರಿನ ಬೊಮ್ಮನಹಳ್ಳಿ ರಾಮ–ಲಕ್ಷ್ಮಣ ದೇವರ ಬೆಟ್ಟದಲ್ಲಿ ಪ್ಯಾಂಟ್ ಮತ್ತು ಶರ್ಟ್ ಸುಟ್ಟು
ಹಾಕಿದ್ದ.

ಈ ಬಗ್ಗೆ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಣಿಗಲ್ ಇನ್ಸ್ಪೆಕ್ಟರ್ ಎಂ.ಜೆ.ಬಾಲಾಜಿ ಸಿಂಗ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಅನಂತ್ ಅವರು ಸೋಮವಾರ ಪ್ರಕರಣದ ಕುರಿತು ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಎ.ಕವಿತಾ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.