ಭಾನುವಾರ, ಆಗಸ್ಟ್ 14, 2022
25 °C
ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಕೊರೊನಾ ಲೆಕ್ಕಿಸದೆ ಗುಂಪು ಸೇರಿದ ರೈತರು

ಟಾರ್ಪಲ್‌ಗಾಗಿ ಬೆಳಗ್ಗೆಯಿಂದಲೇ ಸಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹಾಗೂ ಕಂದಿಕೆರೆ ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಲ್‌ಗಾಗಿ ಬೆಳಗ್ಗೆ 7 ಗಂಟೆಯಿಂದಲೇ ರೈತರು  ಕೋವಿಡ್‌ ಮಾರ್ಗಸೂಚಿ ಮರೆತು ಸಾಲಿನಲ್ಲಿ ನಿಂತಿದ್ದರು.

ಕಳೆದ ಎರಡು ದಿನಗಳಿಂದಲೂ ತಾಲ್ಲೂಕಿನ ಹೋಬಳಿಗಳ ರೈತಸಂಪರ್ಕ ಕೇಂದ್ರಗಳಲ್ಲಿ ಟಾರ್ಪಲ್ ವಿತರಣೆ ಮಾಡಲಾಗುತ್ತಿತ್ತು. ಗುರುವಾರ ಕೂಡ ವಿತರಣೆ ಮುಂದುವರೆದಿದ್ದು
ಕಂದಿಕೆರೆ ಹಾಗೂ ಹಂದನಕೆರೆ
ರೈತ ಸಂಪರ್ಕ ಕೇಂದ್ರಗಳು ಬಾಗಿಲು ತೆಗೆಯುವ ಮುಂಚೆಯೇ ಕಾದು ನಿಂತಿದ್ದರು. ಟಾರ್ಪಲ್‌ಗಿಂತ ಸರದಿ ಸಾಲಿನ ರೈತರ ಸಂಖ್ಯೆ ಹೆಚ್ಚಿದ್ದು,
ರೈತರು ಟಾರ್ಪಲ್ ಸಿಗುವುದೊ, ಇಲ್ಲವೋ ಎಂಬ
ಧಾವಂತದಲ್ಲಿದ್ದರು.

ಈ ಬಾರಿ ರೈತರಿಗೆ ವಿತರಣೆ ಮಾಡುವ ಟಾರ್ಪಲ್‌ಗಳು ಮೂರರಷ್ಟು ಹೆಚ್ಚಿಸಲಾಗಿದೆ. ಪ್ರತಿ ರೈತ
ಸಂಪರ್ಕಗಳಿಗೆ 800ಕ್ಕೂ ಹೆಚ್ಚು ಟಾರ್ಪಲ್‌ಗಳು ಬಂದಿದ್ದು ರೈತರು
ಹೆಚ್ಚು ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಪೊಲೀಸರ ಸಮ್ಮುಖದಲ್ಲಿ ಟೋಕನ್‌ ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು