ತುಮಕೂರು: ಮಕ್ಕಳು, ಸಾಹಿತಿಗಳು, ಯುವಜನರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ನೊಂದ ಜೀವಗಳಿಗೆ ತಬ್ಬಲು ಒಂದು ಮಡಿಲು, ಅಂತಃಕರಣ ಬೇಕಿದೆ. ಇಡೀ ಜಗತ್ತೇ ಸಾಂತ್ವನ, ಪ್ರೀತಿಗೆ ಹಂಬಲಿಸುತ್ತಿದೆ ಎಂದು ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಹೇಳಿದರು.

ನಗರದಲ್ಲಿ ಈಚೆಗೆ ನಡೆದ ಅಂಗಳ ಕಮ್ಯುನಿಟಿ ಟ್ರಸ್ಟ್ ಉದ್ಘಾಟನೆ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೀತಿ, ಸಂಬಂಧಗಳು ಮಾತಿನಲ್ಲಿ ಅಲ್ಲ, ಭಾವನೆಯಾಗಿ ಹೊರ ಹೊಮ್ಮಬೇಕು. ಸಾಹಿತ್ಯ, ಹೋರಾಟಗಳು ಸಮಸ್ಯೆಗೆ ಪರಿಹಾರ ಹುಡುಕುವ ಜತೆಗೆ ಮಾನವೀಯ ಸಂಬಂಧ ಬೆಸೆಯಬೇಕು. ಭಿನ್ನ ಧ್ವನಿಗಳನ್ನು ಸಹಿಸಿಕೊಳ್ಳುವ ಮನೋಭಾವ ವೃದ್ಧಿಯಾಗಬೇಕು. ಜಿಲ್ಲೆಯಲ್ಲಿ ಚಳವಳಿಗೆ ಪರಂಪರೆ, ಇತಿಹಾಸವಿದೆ. ಇತ್ತೀಚೆಗೆ ಅನ್ಯಾಯ ಪ್ರಶ್ನಿಸುವ ಮನೋಭಾವ ಕ್ಷೀಣಿಸುತ್ತಿದೆ ಎಂಬ ಆತಂಕವನ್ನು ಅಂಗಳ ಕಮ್ಯುನಿಟಿ ಟ್ರಸ್ಟ್ ದೂರ ಮಾಡಿದೆ ಎಂದರು.

ಟ್ರಸ್ಟ್ನಿಂದ ಹೆಚ್ಚು ಸಮಾಜಮುಖಿ ಕೆಲಸ ನಿರೀಕ್ಷಿಸುತ್ತೇವೆ. ಈ ಸಂಸ್ಥೆಯ ಜತೆಗೆ ನಮ್ಮ ಇರುವಿಕೆ ಸದಾ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಹೆತ್ತೇನಹಳ್ಳಿ ಮಂಜುನಾಥ್, ‘ಪ್ರಸ್ತುತ ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿದೆ. ಶಿಕ್ಷಣ ಮುಗಿದ ನಂತರ ಸಮಾಜಕ್ಕೆ ಋಣ ಸಂದಾಯ ಮಾಡಬೇಕು ಎಂಬ ಮನಃಸ್ಥಿತಿ ಕಣ್ಮರೆಯಾಗುತ್ತಿದೆ. ವಿದ್ಯಾವಂತರು ಆಚೆ ಬರುತ್ತಿದ್ದಾರೆಯೇ ಹೊರತು, ಪ್ರಜ್ಞಾವಂತರಲ್ಲ’ ಎಂದು ತಿಳಿಸಿದರು.

ಲೇಖಕಿಯರಾದ ಬಾ.ಹ.ರಮಾಕುಮಾರಿ, ರಂಗಮ್ಮ ಹೊದೇಕಲ್, ಕಲಾವತಿ ಮಧುಸೂದನ್, ಶಾರದಾಂಬ ಟ್ರಸ್ಟ್ ಸಂಸ್ಥಾಪಕಿ ಯಶೋದ, ಅಂಗಳ ಟ್ರಸ್ಟ್ ಅಧ್ಯಕ್ಷೆ ಎಂ.ಎನ್.ರಂಜಿತಾ, ಕಾರ್ಯದರ್ಶಿ ಪಿ.ಆರ್.ನವೀನ್ಕುಮಾರ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.