ತುಮಕೂರು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಜಿಡಿ ಮಳೆ ಮುಂದುವರಿದಿದ್ದು, ಶುಕ್ರವಾರ ಸಹ ಇಡೀ ದಿನ ಸೋನೆ ಮಳೆ ಸುರಿಯಿತು.

ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಸೂರ್ಯನ ಬೆಳಕು ಕಾಣಿಸಲಿಲ್ಲ. ಚಳಿ ಹೆಚ್ಚಾಗಿದ್ದು, ಜನರು ಬೆಚ್ಚನೆ ಉಡುಪಿಗೆ ಪರದಾಡಿದರು. ತಾಪಮಾನ ತೀವ್ರವಾಗಿ ಕುಸಿದಿದ್ದು, ಥಂಡಿಗೆ ಥರಗುಟ್ಟಿದರು. ಬೆಳಿಗ್ಗೆ ಬಿರುಸಾಗಿದ್ದ ಹನಿಗಳು ಮಧ್ಯಾಹ್ನದ ವೇಳೆಗೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿತ್ತು. ಮತ್ತೆ ಸಂಜೆ ವೇಳೆಗೆ ಮಳೆ ಆರಂಭವಾಯಿತು.

ನಗರ ಸೇರಿದಂತೆ ಎಲ್ಲೆಡೆ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ರಾಗಿ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದ್ದು, ರಾಗಿ ತೆನೆ ನೆಲ ಕಚ್ಚಿದೆ. ನವೆಂಬರ್‌ನಲ್ಲಿ ಮಳೆಯಾಗಿರುವುದು ತೋಟಗಾರಿಕೆ ಬೆಳೆಗಳಿಗೆ ವರವಾಗಿ ಪರಿಣಮಿಸಿದೆ.

ಮಳೆ ವಿವರ: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮೀ.ಮೀ).

ತುಮಕೂರು 21.4, ಹೆಬ್ಬೂರು 13, ಊರ್ಡಿಗೆರೆ 6.1, ಬೆಳ್ಳಾವಿ 16.4, ಹಿರೇಹಳ್ಳಿ 17.2, ನೆಲಹಾಳ್ 22.2, ಗುಬ್ಬಿ 14, ಸಿ.ಎಸ್. ಪುರ 10.2, ನಿಟ್ಟೂರು 4.2, ಕಡಬ 25.2, ಹಾಗಲವಾಡಿ 33, ಚೇಳೂರು 22, ಅಂಕಸಂದ್ರ 27, ಕುಣಿಗಲ್ 7.2, ಹುಲಿಯೂರುದುರ್ಗ 15, ನಿಡಸಾಲೆ 12.2, ಕೆ.ಎಚ್.ಹಳ್ಳಿ 17.2, ಅಮೃತೂರು 4.4, ಮಾರ್ಕೋನಹಳ್ಳಿ 4.5. ತಿಪಟೂರು 21.2, ಕೊನೆಹಳ್ಳಿ 5.3, ನೊಣವಿನಕೆರೆ 22, ಹೊನ್ನವಳ್ಳಿ 20, ಹಾಲ್ಕುರಿಕೆ 18.4, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟ 35.1, ದೊಡ್ಡಎಣ್ಣೆಗೆರೆ 5.2, ಹುಳಿಯಾರು 25.2, ಬೋರನಕಣಿವೆ 18, ಶೆಟ್ಟಿಕೆರೆ 20.2, ಸಿಂಗದಹಳ್ಳಿ 30.4 ಮಿ.ಮೀ. ಮಳೆಯಾಗಿದೆ.

ತುರುವೇಕೆರೆ 23, ಸಂಪಿಗೆ 4.2, ದಂಡಿನಶಿವರ 5.8, ಮಾಯಸಂದ್ರ 17.2, ದಬ್ಬೇಘಟ್ಟ 18.6, ಮಧುಗಿರಿ 39, ಬಡವನಹಳ್ಳಿ 40, ಮಿಡಿಗೇಶಿ 5, ಇಟಕದಿಬ್ಬನಹಳ್ಳಿ 23.2, ಕೊಡಿಗೇನಹಳ್ಳಿ 14.7, ಬ್ಯಾಲ್ಯ 35.2, ಶಿರಾ 25.4, ಚಿಕ್ಕನಹಳ್ಳಿ 32.2, ಕಳ್ಳಂಬೆಳ್ಳ 26.6, ಬುಕ್ಕಾಪಟ್ಟಣ 28.2, ತಾವರೆಕೆರೆ 20.6, ಬರಗೂರು 22.4, ಹುಣಸೇಹಳ್ಳಿ 16.4, ಕೊರಟಗೆರೆ 22, ಕೋಳಾಲ 24.2, ತುಂಬಾಡಿ 20.2, ಹೊಳವನಹಳ್ಳಿ 18.2, ಮಾವತ್ತೂರು 28, ಇರಕಸಂದ್ರ 25.2, ತೋವಿನಕೆರೆ 15.4, ಪಾವಗಡ 18, ಅರಸೀಕೆರೆ 13.6, ವೈ.ಎನ್. ಹೊಸಕೋಟೆ 25, ತಿರುಮಣಿ 10, ನಾಗಲಮಡಿಕೆ 25 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.