ಶುಕ್ರವಾರ, ಡಿಸೆಂಬರ್ 4, 2020
25 °C

ಇಂದು ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬೆಸ್ಕಾಂ ಗುಬ್ಬಿ ಉಪವಿಭಾಗ ವ್ಯಾಪ್ತಿಯ ಗದ್ದೆಹಳ್ಳಿ ಉಪಸ್ಥಾವರ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಕಾರಣ ನ. 20ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಿ.ಎಸ್. ಪುರ, ಗದ್ದೆಹಳ್ಳಿ, ಉಂಗ್ರ, ಮಾವಿನಹಳ್ಳಿ, ನೆಟ್ಟೆಕೆರೆ, ಅವ್ವೇರಹಳ್ಳಿ, ಮಣಿಕುಪ್ಪೆ, ನಾರನಹಳ್ಳಿ, ಚೀರನಹಳ್ಳಿ, ಇಡಗೂರು, ಬೋರಪ್ಪನಹಳ್ಳಿ  ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇಂದಿನಿಂದ ವ್ಯತ್ಯಯ: ಬೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯ ತುಮಕೂರು 66 ಕೆವಿ ಸ್ವೀಕರಣಾ ಕೇಂದ್ರದಿಂದ ಕಾಮಗಾರಿ ನಡೆಯುತ್ತಿರುವುದರಿಂದ ಚಿಕ್ಕಪೇಟೆ, ಅಗ್ರಹಾರ, ಗಾರ್ಡನ್ ರಸ್ತೆ, ಬಿ.ಜಿ. ಪಾಳ್ಯ, ವಿನಾಯಕನಗರ, ಜೆ.ಸಿ. ರಸ್ತೆ, ಸಿವಿಲ್ ಬಸ್ ನಿಲ್ದಾಣ, ಆಂಜನೇಯ ವಿಗ್ರಹ ಹತ್ತಿರ, ಹೊಸಹಳ್ಳಿ, ಕುಪ್ಪೂರು, ಮರಿಹುಚ್ಚಯ್ಯನಪಾಳ್ಯ, ಹಾರೋನಹಳ್ಳಿ ಗ್ರಾಮಗಳಲ್ಲಿ ನ. 20 ಮತ್ತು 21ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ನಾಳೆ ವಿದ್ಯುತ್ ವ್ಯತ್ಯಯ: ಗುಬ್ಬಿ ನಗರ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿರ್ವಹಿಸುತ್ತಿರುವ ಕಾರಣ ‌ಗೋಪಾಲಪುರ, ಜಿ. ಹೊಸಹಳ್ಳಿ, ತಿಪ್ಪೂರು, ಸಿಂಗೋನಹಳ್ಳಿ, ತೊರೆಹಳ್ಳಿ, ಮಾದಾಪುರ, ಹೊದಲೂರು, ಕೊಡಗಿಹಳ್ಳಿ, ಕೊಪ್ಪ, ಹೇರೂರು, ಎಂ.ಎಚ್. ಪಟ್ಟಣ‌, ಉದ್ದೆ ಹೊಸಕೆರೆ, ಹೊನ್ನವಳ್ಳಿ, ಬಿದರೆ, ಅಮ್ಮನಘಟ್ಟ, ಕೆಎಂಎಫ್, ತೊಂಗನಹಳ್ಳಿ ಹಾಗೂ ದೊಡ್ಡಕಟ್ಟಿಗೇನಹಳ್ಳಿಯಲ್ಲಿ ನ. 21ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.