ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ನಿಡಗಲ್ ದುರ್ಗ ಪ್ರವಾಸಿ ಕೇಂದ್ರವಾಗಲಿ- ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ

Last Updated 17 ಆಗಸ್ಟ್ 2020, 17:40 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ನಿಡಗಲ್ ದುರ್ಗವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಸರ್ಕಾರ ಘೋಷಿಸಬೇಕು ಎಂದು ವಾಲ್ಮೀಕಿ ಪೀಠದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಒತ್ತಾಯಿಸಿದರು.

ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ ಸೋಮವಾರ ನಡೆದ ನಿಡಗಲ್ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಐತಿಹಾಸಿಕ, ಪುಣ್ಯ ಕ್ಷೇತ್ರವಾಗಿರುವ ನಿಡಗಲ್ ದುರ್ಗದಲ್ಲಿ ಪ್ರತಿ ಶ್ರಾವಣ ಮಾಸದ 4ನೇ ಸೋಮವಾರ ಸರ್ಕಾರದಿಂದ ಉತ್ಸವ ಆಚರಿಸಬೇಕು. ಸಾಕಷ್ಟು ದೇಗುಲಗಳು, ಅರಣ್ಯ ಪ್ರದೇಶ, ಕಲ್ಯಾಣಿ, ಐತಿಹಾಸಿಕ ಸ್ಮಾರಕಗಳಿರುವ ಈ ಪ್ರದೇಶವನ್ನು ಪ್ರವಾಸಿ ಕೇಂದ್ರ ಎಂದು ಘೋಷಣೆ ಮಾಡಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ‘ನಿಡಗಲ್ ದುರ್ಗದ ಬಗ್ಗೆ ವಿಚಾರಸಂಕಿರಣಗಳನ್ನು ಆಯೋಜಿಸಿ ಸ್ಥಳದ ವಿಶೇಷತೆಗಳ ಬಗ್ಗೆ ತಿಳಿಸುವ ಕೆಲಸವಾಗಬೇಕು. ಬಸ್ ಸೌಲಭ್ಯ ಕಲ್ಪಿಸಿ ಇಲ್ಲಿಗೆ ಬರುವ ಪ್ರವಾಸಿಗರು, ಭಕ್ತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಮುಖಂಡ ತಿಮ್ಮಾರೆಡ್ಡಿ, ಜಿಲ್ಲಾ ಗಿರಿಜನ ನಾಯಕ ನೌಕರ ಸಂಘದ ಗೌರವ ಅಧ್ಯಕ್ಷ ತೀಪ್ಪೇಸ್ವಾಮಿ, ಕಲಾವಿದ ಪಾವಗಡ ಮಂಜು, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯಪ್ಪ, ಶಿವಪ್ಪ, ನರಸಿಂಹ, ಅಂಜನ್ ನಾಯಕ, ಶಿವಮ್ಮ, ನರಸಿಂಹ ಮೂರ್ತಿ, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಸೀನಪ್ಪ, ಅಧೀಕ್ಷಕ ಶ್ರೀನಿವಾಸ, ಕೆ.ಎನ್.ಈರಣ್ಣ, ಪಾಳೇಗಾರ ಲೋಕೇಶ, ಚಿತ್ತಗಾನ ಹಳ್ಳಿ ಚಂದ್ರಶೇಖರ ರಾಜ್, ಓಂಕಾರ್ ನಾಯಕ, ರಾಮಪ್ಪ ಸಾದಿಕ್, ಉಪಸ್ಥಿತರಿದ್ದರು.

ನಿಡಗಲ್ ದುರ್ಗದ ರಾಮತೀರ್ಥದಲ್ಲಿ ಭಕ್ತರು ಗಂಗಾ ಪೂಜೆ ಸಲ್ಲಿಸಿದರು. ಶೂಲದ ಈರಣ್ಣ, ವೀರಭದ್ರಸ್ವಾಮಿ, ಯೋಗ ನರಸಿಂಹಸ್ವಾಮಿ, ರಾಮಲಿಂಗೇಶ್ವರ ಸೇರಿದಂತೆ ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಜನ ಕಡಿದಾದ ಬೆಟ್ಟವನ್ನು ಏರಿ ಶಿಖರದ ಬಸವನಿಗೆ ಪೂಜೆ ಸಲ್ಲಿಸಿದರು.

ಕಡಿದಾದ ಬೆಟ್ಟ ಏರಿ ಪೂಜೆ: ನಿಡಗಲ್ ದುರ್ಗದ ರಾಮತೀರ್ಥದಲ್ಲಿ ಭಕ್ತರು ಗಂಗಾ ಪೂಜೆ ಸಲ್ಲಿಸಿದರು. ಶೂಲದ ಈರಣ್ಣ, ವೀರಭದ್ರಸ್ವಾಮಿ, ಯೋಗ ನರಸಿಂಹಸ್ವಾಮಿ, ರಾಮಲಿಂಗೇಶ್ವರ ಸೇರಿದಂತೆ ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಜನ ಕಡಿದಾದ ಬೆಟ್ಟವನ್ನು ಏರಿ ಶಿಖರದ ಬಸವನಿಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT