ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಒಪ್ಪಂದ ವಿರೋಧಿಸಿ ಇಂದು ಪಾದಯಾತ್ರೆ

ಗಾಂಧಿ ಸಹಜ ಬೇಸಾಯ ಆಶ್ರಮದ ಬಳಿ ಚಾಲನೆ
Published 1 ಅಕ್ಟೋಬರ್ 2023, 13:52 IST
Last Updated 1 ಅಕ್ಟೋಬರ್ 2023, 13:52 IST
ಅಕ್ಷರ ಗಾತ್ರ

ತುಮಕೂರು: ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಬೇಯರ್ಸ್‌ ಕಂಪನಿ ಜತೆಗೆ ಭಾರತೀಯ ಕೃಷಿ ಮಂಡಳಿ (ಐಸಿಎಆರ್‌) ಮಾಡಿಕೊಂಡಿರುವ ಒಪ್ಪಂದಗಳನ್ನು ವಿರೋಧಿಸಿ ಅ.2ರಂದು ಗಾಂಧಿ ಸಹಜ ಬೇಸಾಯ ಆಶ್ರಮದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ದೊಡ್ಡಹೊಸೂರು ಬಳಿಯ ಆಶ್ರಮದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಯಲಿದೆ. ಆಶ್ರಮದಲ್ಲಿ ಬೆಳಿಗ್ಗೆ 9 ಗಂಟೆಗೆ ಡಾ.ಎಚ್.ಮಂಜುನಾಥ್‌, ಸಿ.ಯತಿರಾಜು ಒಪ್ಪಂದ ಕುರಿತು ಆಸಕ್ತರ ಜತೆ ಚರ್ಚೆ ನಡೆಸಲಿದ್ದಾರೆ. 10 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.

ಕೃಷಿ ಕ್ಷೇತ್ರಕ್ಕೆ ವಿನಾಶಕಾರಿಯಾಗಿರುವ ಒಪ್ಪಂದ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತದೆ. ರೈತ ಸಂಘ, ಪರಿಸರ, ಗ್ರಾಹಕ ಸಂಘಟನೆಗಳ ಪದಾಧಿಕಾರಿಗಳು, ಆಸಕ್ತ ಕೃಷಿ, ಪರಿಸರ ಪ್ರೇಮಿಗಳು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಶ್ರಮದ ಸಂಚಾಲಕ ಡಾ.ಎಚ್.ಮಂಜುನಾಥ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT