ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.2ರಂದು ಎಸ್‌ಐಟಿ ಹಳೇ ವಿದ್ಯಾರ್ಥಿಗಳ ಸಂಘದ ಸಭೆ

Last Updated 29 ಸೆಪ್ಟೆಂಬರ್ 2019, 16:28 IST
ಅಕ್ಷರ ಗಾತ್ರ

ತುಮಕೂರು: ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ಪದವೀಧರ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಅ.2ರಂದು ಕಾಲೇಜಿನ ಆವರಣದ ಬಿರ್ಲಾ ಸಭಾಂಗಣದಲ್ಲಿ ನಡೆಯಲಿದೆ.

1964ರ ಎಸ್‌ಐಟಿ ವಿದ್ಯಾರ್ಥಿಗಳು ಪದವೀಧರರಾದ ಸುವರ್ಣ ಮಹೋತ್ಸವ ಹಾಗೂ 1990ರ ವಿದ್ಯಾರ್ಥಿಗಳು ಪದವೀಧರರಾದ ರಜತ ಮಹೋತ್ಸವ ಸಹ ಜರುಗಲಿದೆ. ಈ ಪ್ರಯುಕ್ತ ಅವರನ್ನು ಗೌರವಿಸಲಾಗುತ್ತಿದೆ.

‘ಹಳೆಯ ವಿದ್ಯಾರ್ಥಿಗಳ ಸಂಘದ ನಿಸರ್ಗ ಕಾಳಜಿ’ ಎಂಬುದು ಮಹಾಸಭೆಯ ಘೋಷ ವಾಕ್ಯವಾಗಿದೆ. ಕಾರ್ಯಕ್ರಮ ಅಂಗವಾಗಿ 2 ಸಾವಿರ ಬೀಜ ಬಿತ್ತನೆ, 500 ಗಿಡಗಳನ್ನು ಸಿದ್ಧಗಂಗಾಮಠದ ಸುತ್ತಮುತ್ತ ನೆಡಲಾಗುವುದು. ಸಂಸ್ಥೆ ಹಳೇ ವಿದ್ಯಾರ್ಥಿಗಳು secretary.sitaa@sit.ac.in, http://tiny.cc/sitaa ಈ ಮೇಲ್‌ಗೆ ತಮ್ಮ ಮಾಹಿತಿ ಕಳುಹಿಸಬಹುದು ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT