ಕೊಡಿಗೇನಹಳ್ಳಿ: ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸಮವಸ್ತ್ರ ವಿತರಿಸಲು ಬಜೆಟ್ನಲ್ಲಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸುವೆ ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.

ಹೋಬಳಿಯ ಚಿಕ್ಕಮಾಲೂರು ಗ್ರಾಮದಲ್ಲಿ ಬುಧವಾರ ಅಂಗನವಾಡಿ ಕೇಂದ್ರ, ಕುಡಿಯುವ ನೀರಿನ ಘಟಕ ಉದ್ಘಾಟನೆ, ಶಾಲೆ ಕೊಠಡಿ, ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕುಣಿಗಲ್ ಶಾಸಕರು ಇತ್ತೀಚೆಗೆ ‘ಕೆ.ಎನ್. ರಾಜಣ್ಣ ಮಧುಗಿರಿ ತಾಲ್ಲೂಕಿಗೆ ಡಿಸಿಸಿ ಬ್ಯಾಂಕ್ನಿಂದ ಹೆಚ್ಚು ಸಾಲ ನೀಡಿದ್ದಾರೆ’ ಎಂದು ಹೇಳಿಕೆ ಕೊಟ್ಟಿದ್ದರು. ಹೌದು ಅವರು ಹೇಳಿದ್ದು ನಿಜ ಈ ತಾಲ್ಲೂಕು ಆರ್ಥಿಕವಾಗಿ ಹಿಂದುಳಿದ ಪ್ರದೇಶ ಹಾಗಾಗಿ ನೀಡಿದ್ದೇನೆ. ಮುಂದೆ ಮಧುಗಿರಿ ತಾಲ್ಲೂಕಿಗೆ ಇನ್ನೂ ಹೆಚ್ಚಿನ ಸಾಲ ನೀಡುತ್ತೇನೆ ಎಂದರು.

ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಶಿಕ್ಷಣಕ್ಕೆ ಮಾತ್ರ ಜೀವನ ಹಾಗೂ ಬದುಕನ್ನು ಬದಲಾಯಿಸುವ ಶಕ್ತಿ ಇರುವುದೆಂದು ಅರಿತು ಶಾಸಕ ಕೆ.ಎನ್. ರಾಜಣ್ಣ ಚಿಕ್ಕಮಾಲೂರು ಸರ್ಕಾರಿ ಶಾಲೆಗೆ ₹1.10 ಕೋಟಿ ಅನುದಾನ ನೀಡಿದ್ದಾರೆ ಎಂದರು.

ತಹಶೀಲ್ದಾರ್ ಶ್ರೀನಿವಾಸ್, ಡಿಡಿ ಮಾಧವರೆಡ್ಡಿ, ಬಿಇಒ ಕೆ.ಎನ್. ಹನುಮಂತರಾಯಪ್ಪ, ಎಡಿಒ ಧನಂಜಯ್, ರಾಜಶೇಖರ್, ಅಧ್ಯಕ್ಷ ಎ.ಎಲ್. ಅಶ್ವತ್ಥಯ್ಯ, ಉಪಾಧ್ಯಕ್ಷೆ ಪುಷ್ಪಾ, ಪಿಡಿಒ ಮುತ್ತುರಾಜ್ ಹಾಗೂ ಜಿ.ಜೆ. ರಾಜಣ್ಣ, ಎಂ.ಜಿ. ಶ್ರೀನಿವಾಸಮೂರ್ತಿ, ಆದಿನಾರಾಯಣರೆಡ್ಡಿ, ಗಂಗಣ್ಣ, ಚೌಡಪ್ಪ, ನಂಜುಂಡರಾಜ್, ಎಲ್. ರಾಮಯ್ಯ, ಸಂಜೀವಮೂರ್ತಿ, ವಿ.ಆರ್. ಭಾಸ್ಕರ್, ಇಂದಿರದೇನಾನಾಯ್ಕ್, ಸುವರ್ಣಮ್ಮ, ನಿಸಾರ್ ಅಹಮದ್, ದಿನೇಶ್, ಲಾಲಪೇಟೆ ಮಂಜುನಾಥ್, ಎಂ.ಪಿ. ಕಾಂತರಾಜು, ಜೆ.ಡಿ. ವೆಂಕಟೇಶ್, ಜಗದೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.