ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೆಗಾಂವ್ ದಂಗೆ ಹೋರಾಟಗಳಿಗೆ ಪ್ರೇರಣೆ

ಶಿರಾದಲ್ಲಿ ವಿಜಯೋತ್ಸವ ಆಚರಣೆ
Last Updated 3 ಜನವರಿ 2021, 3:45 IST
ಅಕ್ಷರ ಗಾತ್ರ

ಶಿರಾ: ದೇಶದಲ್ಲಿ ಸ್ವಾಭಿಮಾನಕ್ಕಾಗಿ ನಡೆದ ಕೊರೆಗಾಂವ್ ಯುದ್ಧ ಇಂದಿನ ಪ್ರತಿಯೊಂದು ಹೋರಾಟಕ್ಕೂ ಪ್ರೇರಣೆಯಾಗಿದೆ ಎಂದು ಶೋಷಿತ ಸಮಾಜ ಸಂಘರ್ಷ ಸಮಿತಿ ತಾಲ್ಲೂಕು ಶಾಖೆ ಅಧ್ಯಕ್ಷ ಟೈರ್ ರಂಗನಾಥ್ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಆಯೋಜಿಸಿದ್ದ ಭೀಮ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಾರಾಷ್ಟ್ರದ ಭೀಮಾ ತೀರದಲ್ಲಿ ಪರಿಶಿಷ್ಟರು ಸುಮಾರು 30 ಸಾವಿರ ಪೇಶ್ವೆಗಳನ್ನ ಸೆದೆ ಬಡಿದು ವಿಜಯ ಸಾಧಿಸಿದ್ದು ಇದನ್ನು ನಮ್ಮ ಇತಿಹಾಸದಲ್ಲಿ ಎಲ್ಲಿಯೂ ನಮೂದಿಸದಿರುವುದು ನೋವಿನ ಸಂಗತಿ. ಇದು ದೇಶದಲ್ಲಿ ಪರಿಶಿಷ್ಟರ ಮೇಲೆ ನಡೆಯುತ್ತಿರುವ ತಾರತಮ್ಯ ಇದನ್ನು ಅಂಬೇಡ್ಕರ್ ಅವರು ಬೆಳಕಿಗೆ ತರದಿದ್ದರೆ ದಲಿತರಿಗೆ ಬಹುದೊಡ್ಡ ಅನ್ಯಾಯವಾಗುತ್ತಿತ್ತು’ ಎಂದರು.

ಹುಲಿಕುಂಟೆ ಹೋಬಳಿ ಸಂಯೋಜಕ ಭೂತರಾಜು ಮಾತನಾಡಿ, ‘ಸಿಪಾಯಿ ದಂಗೆಗೆ ಮೊದಲೇ ನಡೆದಿದ್ದ ಭೀಮ ಕೊರೆಗಾಂವ್ ದಂಗೆಯ ಮುಂದಾಳತ್ವವನ್ನು ವಹಿಸಿದ್ದ ಸಿದ್ದನಾಯಕ ಬ್ರಿಟಿಷ್ ಸೈನ್ಯದಲ್ಲಿ ಒಳ್ಳೆಯ ಯುದ್ಧ ನಿಪುಣನಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸದೆ ಪೇಶ್ವೆಗಳು ಅಸ್ಪೃಶ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೇಶ್ವೆಗಳ ವಿರುದ್ಧ ಪ್ರಾರಂಭವಾದ ದಂಗೆ ಬಹುದೊಡ್ಡ ಕ್ರಾಂತಿ ಸೃಷ್ಟಿಸಿತು’ ಎಂದರು.

ಪ್ರಾಂಶುಪಾಲ ಕೃಷ್ಣನಾಯ್ಕಾ, ಶ್ರೀರಂಗಪ್ಪ, ಹುಣಸೇಕಟ್ಟೆ ನಾಗರಾಜು, ಹನುಮಂತರಾಯಪ್ಪ, ಹುಲೂರಯ್ಯ, ವೆಂಕಟೇಶ್, ರಂಗೇಗೌಡ, ನರಸಿಂಹಮೂರ್ತಿ, ಕೆ.ರಾಜು, ಗೋಪಾಲಕೃಷ್ಣ ಬಸವನಹಳ್ಳಿ, ಗೋಪಾಲ್ ಹುಂಜಿನಾಳ್, ಕಾರ್ತಿಕ್, ಕಾರಳಪ್ಪ, ಮಹೇಶ್, ರಂಗನಾಥ್, ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT