ಗುರುವಾರ , ಜನವರಿ 21, 2021
16 °C

ಮೂಡಲಪಾಯ ಯಕ್ಷಗಾನ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಕಲೆ, ಸಾಹಿತ್ಯ, ಸಂಸ್ಕೃತಿ ಆಧಾರದಿಂದ ದೇಶದ ಶ್ರೀಮಂತಿಕೆ ಅಳೆಯಬಹುದು ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಭಾಗವತ್ ಕಲ್ಮನೆ ಎ.ಎಸ್.ನಂಜಪ್ಪ ತಿಳಿಸಿದರು.

ತಾಲ್ಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ನಡೆದ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವೈಭವೀಕರಣದ ಕಲೆಗಳ ಭರಾಟೆಯಲ್ಲಿ ಹಿರಿಯರ ಜನಪದೀಯ ಕಲೆಗಳು ಮಂಕಾಗುತ್ತಿದೆ. ಸತ್ವಭರಿತವಾದ ಸನಾತನ ಕಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಯುವಸಮುದಾಯಕ್ಕೆ ಕಲೆಗಳನ್ನು ಪರಿಚಯಿಸಿ ತರಬೇತಿಯನ್ನು ನೀಡುವ ಕಾರ್ಯ ಮಾಡಬೇಕಾಗಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಭಾಗವತ್ ಎ.ಎನ್.ಚನ್ನಬಸವಯ್ಯ ಮಾತನಾಡಿ, ಭಾರತದ ಪುರಾತನ ಹಾಗೂ ಸಾಂಪ್ರದಾಯಿಕ ಜನಪದೀಯ ಕಲಾ ಪ್ರಕಾರಗಳಲ್ಲಿ ಮೂಡಲಪಾಯ ಯಕ್ಷಗಾನ ಒಂದಾಗಿದೆ. ಇದೊಂದು ಶಾಸ್ತ್ರೀಯವಾದ ಸ್ವತಂತ್ರ ಕಲೆ. ನೃತ್ಯ, ಅಭಿನಯ, ಮಾತುಗಾರಿಕೆ, ಹಾಡುಗಾರಿಕೆ, ವೈವಿಧ್ಯಮಯ ವೇಷಭೂಷಣಗಳಿಂದ ಎಲ್ಲರನ್ನು ಆಕರ್ಷಿಸುತ್ತದೆ. ಅಪಾರ ಸತ್ವ ಮತ್ತು ಮೌಲ್ಯಗಳಿಂದ ತುಂಬಿರುವ ಜೀವನದ ಹಾಗೂ ಲೋಕಾನುಭವದ ಸತ್ಯಸಂಗತಿಗಳನ್ನು ತೆರೆದಿಡುವ ಇಂತಹ ಕಲೆಗಳನ್ನು ಯುವ ಸಮುದಾಯ ಕರಗತ ಮಾಡಿಕೊಳ್ಳಬೇಕು ಎಂದರು.

ತಾ.ಪಂ.ಸದಸ್ಯ ಅರಳಗುಪ್ಪೆ ಪುಟ್ಟಸ್ವಾಮಿ, ಅರಳಗುಪ್ಪೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎ.ಜಿ.ನಾಗರಾಜು, ಯೋಗೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು