ಶಾರ್ಟ್ ಸರ್ಕಿಟ್; 6.5 ಎಕರೆ ತೋಟ ಭಸ್ಮ

ಸೋಮವಾರ, ಮೇ 27, 2019
24 °C

ಶಾರ್ಟ್ ಸರ್ಕಿಟ್; 6.5 ಎಕರೆ ತೋಟ ಭಸ್ಮ

Published:
Updated:
Prajavani

ಚಿಕ್ಕನಾಯಕನಹಳ್ಳಿ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ 6.5 ಎಕರೆ ತೆಂಗಿನತೋಟ ಬೆಂಕಿಗೆ ಆಹುತಿ ಆಗಿದೆ.

ತೋಟದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಿಂದ ಸಿಡಿದ ಕಿಡಿ ಪಕ್ಕದಲ್ಲಿದ್ದ ಬಿದುರು ಮೆಳೆಗೆ ತಗುಲಿದೆ. ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ಜೊತೆಗೆ ಬಿಸಿಲಿಗೆ ತೋಟ ಬಳಲಿ ಬೆಂಡಾಗಿದ್ದರಿಂದ ಹಾಗೂ ಒಣಸೋಗೆ ಇದ್ದುದ್ದರಿಂದ ಬೆಂಕಿ ಹತೋಟಿಗೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

 ರೈತರಾದ ಶಿವಪ್ರಸಾದ್ ಹಾಗೂ ಮಲ್ಲಿಕಾರ್ಜುನಯ್ಯ ಎಂಬುವವರಿಗೆ ಸೇರಿದ್ದ ಸರ್ವೆ ನಂ.49 ಹಾಗೂ 50ರಲ್ಲಿದ್ದ 250ಕ್ಕೂ ಹೆಚ್ಚು ತೆಂಗಿನ ಮರಗಳು, ಮಾವಿನ ಮರಗಳು, ಜೀವಂತ ಬೇಲಿ ಹಾಗೂ ಬಿದುರು ಮೆಳೆಗಳು ಬೆಂಕಿಯಲ್ಲಿ ಭಸ್ಮವಾಗಿವೆ.  ಶಿವಪ್ರಸಾದ್ ಅವರಿಗೆ ₹ 10 ಲಕ್ಷ ಹಾಗೂ ಮಲ್ಲಿಕಾರ್ಜುನಯ್ಯ ಅವರಿಗೆ ₹ 4 ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !