ಸೋಮವಾರ, ಡಿಸೆಂಬರ್ 9, 2019
17 °C

ಉಪ್ಪಾರಹಳ್ಳಿ ತಾಂಡ: ಕುರಿ ಕಳ್ಳನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ತಾಲ್ಲೂಕಿನ ಉಪ್ಪಾರಹಳ್ಳಿ ತಾಂಡದಲ್ಲಿ ಕುರಿ, ಮೇಕೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ತಿರುಮಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ಅನಂತಪುರ ಜಿಲ್ಲೆ ಸನಪ ಗ್ರಾಮದ ಅಂಜಿ ಬಂಧಿತ ಆರೋಪಿ. ಸೋಮವಾರ ರಾತ್ರಿ ರಾಮಾನಾಯ್ಕ, ಡಾಕಾನಾಯ್ಕ ಎಂಬುವವರ ಕುರಿಗಳನ್ನು ಕಳವು ಮಾಡಲಾಗಿತ್ತು. ತಿರುಮಣಿ ಪೊಲೀಸರು ಆರೋಪಿಯ ಜಾಡು ಹಿಡಿದು ಬಂಧಿಸಿದ್ದಾರೆ. ಆರೋಪಿಯಿಂದ 75 ಕುರಿ, ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಶೈಲಮೂರ್ತಿ, ಸಬ್ ಇನ್‌ಸ್ಪೆಕ್ಟರ್ ರಾಮಕೃಷ್ಣಪ್ಪ, ಕೇಶವರಾಜು, ಗೋಕರ್ಣ, ಸೋಮು, ನಾಗೇಂದ್ರಪ್ರಸಾದ್, ಪುಂಡಲೀಕ್ ಲಮಾಣಿ, ಪ್ರವೀಣ್ ಭಜಂತ್ರಿ ತನಿಖಾ ತಂಡದಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು