ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ನೆಟ್ಟು ಪರಿಸರ ದಿನಾಚರಣೆ

Last Updated 6 ಜೂನ್ 2021, 1:59 IST
ಅಕ್ಷರ ಗಾತ್ರ

ತುಮಕೂರು: ನಗರದ ಹನಮಂತಪುರ ಮುಖ್ಯರಸ್ತೆಯಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು.

ಈ ಸಂದರ್ಭದಲ್ಲಿ ನಾಗರಿಕರಿಗೆ ತರಕಾರಿ ವಿತರಿಸಿದ ಜಿ.ಎಸ್.ಬಸವರಾಜು, ನಗರದ ಸುತ್ತಮುತ್ತಲಿನ ಉದ್ಯಾನವನಗಳಲ್ಲಿ ಆಲ, ಬೇವು, ಅರಳಿಮರ ಸೇರಿದಂತೆ ಆಮ್ಲಜನಕ ಕೊಡುವಂತಹ ಮರಗಳನ್ನು ನೆಟ್ಟು ಪೋಷಿಸಬೇಕು ಎಂದು ಸಲಹೆ ನೀಡಿದರು.

ನಾವು ಈ ಹಿಂದೆ ನಗರದ ವಿವಿಧ ಕಡೆಗಳಲ್ಲಿ 28 ಸಾವಿರ ಗಿಡಗಳನ್ನು ಹಾಕಿದ್ದೆವು. ಅದರಲ್ಲಿ 18 ಸಾವಿರ ಗಿಡಗಳು ಮಾತ್ರ ಬೆಳೆದಿವೆಎಂದರು.

ಕೊಲ್ಲಾಪುರದಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಎಲ್‌.ಕುಂಭಣ್ಣ ಸೇರಿದಂತೆ ಇತರೆ ಮುಖಂಡರು ರೈತರಿಂದ ತರಕಾರಿ ಖರೀದಿಸಿ ವಿತರಿಸುತ್ತಿದ್ದಾರೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಟಿ.ಕೆ.ನರಸಿಂಹಮೂರ್ತಿ, ಲಾಕ್‍ಡೌನ್ ವೇಳೆ ಪ್ರತಿದಿನ ಬೆಳಿಗ್ಗೆ ಒಂದು ಸಾವಿರ ಮಂದಿಗೆ ಉಚಿತವಾಗಿ ಉಪಾಹಾರ ವಿತರಿಸುತ್ತಿದ್ದೇವೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಸದಸ್ಯರಾದ ಲಲಿತಾ
ರವೀಶ್, ಎ.ಶ್ರೀನಿವಾಸ್, ಮುಖಂಡ ಜಾಂಗೀರ್ ರವೀಶ್, ಎಸ್.ನಾಗಣ್ಣ, ಕುಂಭಿನರಸಯ್ಯ, ಎನ್.ಎಸ್.ಶಿವಣ್ಣ, ಲೋಕೇಶ್, ರಕ್ಷಿತ್, ಆನಂದರಾಮು, ವೈ.ಟಿ.ರಾಜೇಂದ್ರ, ಟೂಡಾ ಸದಸ್ಯ ಜಗದೀಶ್, ಆರ್‌ಎಫ್‍ಒಗಳಾದ ಪವಿತ್ರ, ನಟರಾಜು, ಅರಣ್ಯ ಅಧಿಕಾರಿ ಜಿ.ಎಚ್.ಪ್ರಕಾಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT