ವಿವೇಕಾನಂದರ ಸಂದೇಶದಲ್ಲಿ ಪರಿವರ್ತನೆ ಶಕ್ತಿ

ಮಂಗಳವಾರ, ಜೂಲೈ 16, 2019
23 °C
ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಕೋಲ್ಕತ್ತದ ರಾಮಕೃಷ್ಣಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್

ವಿವೇಕಾನಂದರ ಸಂದೇಶದಲ್ಲಿ ಪರಿವರ್ತನೆ ಶಕ್ತಿ

Published:
Updated:
Prajavani

ತುಮಕೂರು: ‘ಸ್ವಾಮಿ ವಿವೇಕಾನಂದರ ಸಂದೇಶಗಳಲ್ಲಿ ಬದುಕನ್ನು ಪರಿವರ್ತಿಸುವ ಶಕ್ತಿ ಇದೆ’ ಎಂದು ಕೋಲ್ಕತ್ತದ ರಾಮಕೃಷ್ಣಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ಧ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಂದೇಶಗಳ ಅಧ್ಯಯನದಿಂದ ಐಹಿಕ ಹಾಗೂ ಪಾರಮಾರ್ಥಿಕ ಜೀವನಗಳಲ್ಲಿ ನೈಜ ಆನಂದವನ್ನು ಪಡೆಯುತ್ತೇವೆ. ಶಾಸ್ತ್ರಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಪರಿ, ರಾಮಕೃಷ್ಣರು ಪ್ರತಿಪಾದಿಸಿದ ವೈದಿಕ ಧರ್ಮ ಹಾಗೂ ರಾಷ್ಟ್ರಪ್ರೇಮದ ಸಂದೇಶಗಳು ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯಲ್ಲಿ ಅಡಕವಾಗಿವೆ’ ಎಂದು ತಿಳಿಸಿದರು.

 ಸಾನ್ನಿಧ್ಯವಹಿಸಿದ್ದ ಮಂಗಳೂರು ರಾಮಕೃಷ್ಣ ಮಿಷನ್ನಿನ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಮಾತನಾಡಿ, ವೇದ ಸಾಕ್ಷಾತ್ ಜಗನ್ಮಾತೆ. ಸಂಸ್ಕೃತ ಎಲ್ಲ ಭಾಷೆಗಳ ಮಾತೃಭಾಷೆಯಾಗಿದೆ. ಸಂಸ್ಕೃತ ಅಭ್ಯಾಸದಿಂದ ಭಾಷೆ ಶುದ್ಧವಾಗುತ್ತದೆ. ಆಡುವ ಮಾತು ಸ್ಪಷ್ಟವಾಗುತ್ತದೆ. ಅಧ್ಯಾತ್ಮಿಕ ಸಂಸ್ಕಾರ ಲಭಿಸುತ್ತದೆ. ಸಂಸ್ಕೃತ ಅಭ್ಯಾಸಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಲಿಂಗಬೇಧವಿಲ್ಲ’ ಎಂದು ತಿಳಿಸಿದರು.

ಸ್ವಾಮಿ ಯೋಗೇಶ್ವರಾನಂದಜಿ, ಸ್ವಾಮಿ ಸುಮೇಧಾನಂದಜಿ, ಶಾಸಕ ಜಿ.ಬಿ. ಜ್ಯೋತಿಗಣೇಶ್, ರೆಡ್‌ ಕ್ರಾಸ್ ಸಂಸ್ಥೆ ರಾಜ್ಯ ಘಟಕ ಅಧ್ಯಕ್ಷ ಎಸ್.ನಾಗಣ್ಣ, ಎಚ್.ಎಂ.ಟಿಯ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ, ಪ್ರೊ.ವೈ.ಎಂ.ರೆಡ್ಡಿ, ಡಾ.ಕರುಣಾಕರ್, ಗುರುಸ್ವಾಮಿ, ರುದ್ರೇಶ್ ಇದ್ದರು. ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಗತಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !