ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು | ಬಲಿಗಾಗಿ ಕಾದಿದೆ ವಿದ್ಯುತ್‌ ಕಂಬ

Last Updated 20 ಮೇ 2020, 11:18 IST
ಅಕ್ಷರ ಗಾತ್ರ

ಚೇಳೂರು: ಎರಡು ವರ್ಷಗಳಿಂದ ವಿದ್ಯುತ್ ಕಂಬ ಮುರಿದು ಡೊಂಕಾಗಿ ನಿಂತಿದ್ದರೂ ಬೆಸ್ಕಾಂ ಅಧಿಕಾರಿಗಳು ಅದನ್ನು ಬದಲಾಯಿಸುವ ಗೋಜಿಗೆ ಹೋಗಿಲ್ಲ ಎಂದು ಬಂಡಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗಲವಾಡಿ ಹೋಬಳಿಯ ಬಂಡನಹಳ್ಳಿ ಮತ್ತು ಬೋಗಸಂದ್ರ ನಡುವೆ ಹಾದುಹೋಗುವ ಲೈನ್ ಮದ್ಯೆ ವಿದ್ಯುತ್‌ ಕಂಬ ಮುರಿದಿದೆ.

‘ನಿತ್ಯ ಕುರಿ ಮೇಕೆ ಮೇಯಿಸಿ ಪಕ್ಕದಲ್ಲೇ ಇರುವ ಕೆರೆಗೆ ನೀರು ಕುಡಿಸಲು ಹತ್ತಾರು ಮಂದಿ ಬರುತ್ತಾರೆ. ಅಪ್ಪಿತಪ್ಪಿ ವಿದ್ಯುತ್ ಕಂಬ ಬಿದ್ದರೆ ಅನಾಹುತ ಆಗುವುದು ನಿಶ್ಚಿತ’ ಎಂದು ಗ್ರಾಮಸ್ಥ ಕಲಾವತಿ ಶ್ರೀರಂಗಯ್ಯಗ್ರಾಮ ಪಂಚಾಯಿತಿ ಸದಸ್ಯೆ ದೂರುತ್ತಾರೆ.

ಬೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಗೋಪಾಲ್ ಮಂಜು, ರಾಜಣ್ಣ, ಶಿವಕುಮಾರ್, ಲೋಕೇಶ್, ಕಿರಣ್, ಚಂದ್ರ, ರಾಜಣ್ಣ, ಲಿಂಗರಾಜು, ಬಂಡಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT