ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರು ತುಮಕೂರು ಜಿಲ್ಲೆಗೆ ಮಾಡಿದ ಮೋಸಕ್ಕೆ ಜನರ ಪಾಠ: ಮಾಧುಸ್ವಾಮಿ

Last Updated 23 ಮೇ 2019, 11:33 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಜನರು ಪ್ರಬುದ್ಧವಾಗಿದ್ದಾರೆ ಬೇರೆಯವರನ್ನು ಸಹಿಸಲ್ಲ.ದೇವೇಗೌಡರು ಬರಬಾರದಿತ್ತು, ನೋವಿದೆ. ಅವರು ಜಿಲ್ಲೆಗೆ ಮಾಡಿದ ಮೋಸ ಜನರು ನೆನಪು ಮಾಡಿಕೊಂಡು ಚುನಾವಣೆಯಲ್ಲಿ ಅದಕ್ಕೆ ಉತ್ತರಿಸಿದ್ದಾರೆ ಎಂದು ಶಾಸಕ ಜೆ.ಸಿ ಮಾಧುಸ್ವಾಮಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, 'ಕಾರ್ಯಕರ್ತರರು ಕೆಲಸ ಮಾಡಿದರು, ಪಕ್ಷಾತೀತವಾಗಿ ಸಹಾಯ ಮಾಡಿದ್ದಾರೆ.ಜೀವದ ನೆಲೆ, ಸೆಲೆ ಉಳಿಸುವ ಭರವಸೆಯಿಂದ ಬಿಜೆಪಿ ಗೆಲ್ಲಿಸಿದ್ದಾರೆ. ಜನರು ಹೋರಾಟ ಕೇಳ್ತಾರೆ.ನಮ್ಮ ಜವಾಬ್ಧಾರಿ ಜಾಸ್ತಿಯಾಗಲಿದೆ. ನಾನು ಹಿರಿಯ ಶಾಸಕನಾಗಿ ಜವಾಬ್ಧಾರಿ ವಹಿಸುತ್ತೇನೆ ಎಂದು ಹೇಳಿದರು.

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತೇವೆ. ಜನರ ಋಣ ತೀರಿಸಬೇಕು. ರಾಜಕಾರಣದಲ್ಲಿ ಜಾತಿಗೆ ಬೆಲೆ ಇಲ್ಲ ಎಂಬುದು ತುಮಕೂರು, ಮಂಡ್ಯದಲ್ಲಿ ಜನ ತೋರಿಸಿದ್ದಾರೆ, ಜಾತಿ ರಾಜಕಾರಣ ನಡೆಯುವುದಿಲ್ಲ ಎಂದರು.

ಜನರ ಕಷ್ಟ, ಸುಖಕ್ಕೆ ಸ್ಪಂದಿಸಬೇಕು.ನೈಜ ಪ್ರಜಾಪ್ರಭುತ್ವ ಆರಂಭವಾಗಲಿ. ಬಿಜೆಪಿ ಮೇಲೆ ವಿಶ್ವಾಸವಿಟ್ಟು ಜನ ಮತ ಕೊಟ್ಟಿದ್ದಾರೆ. ಅನೈತಿಕ ಸಂಬಂಧದ ಕಾರ್ಯ ಬಟ್ಟ ಬಯಲಾಗಿದೆ ಎಂದರು.

ಸಮ್ಮಿಶ್ರ ಸರ್ಕಾರದ ವಿರುದ್ಧದ ಫಲಿತಾಂಶ ದೊರಕಿದೆ.ನೀರಾವರಿ ನಮ್ಮ‌ಆದ್ಯತೆ ಸಿಗಲಿದೆ. ಚಿಕ್ಕನಾಯಕನಹಳ್ಳಿ, ತುರುವೇಕೆರೆಯಲ್ಲಿ ಲೀಡ್ ಕಷ್ಟ ಎಂಬುದು ಗೊತಿತ್ತು. ನನ್ನ ಕ್ಷೇತ್ರದಲ್ಲಿ ಮತದಾರರು ನನಗಿಂತ ಜಾಸ್ತಿ ಮತ ಬಸವರಾಜ ಅವರಿಗೆ ಕೊಟ್ಟಿದ್ದಾರೆ ಎಂದರು.

ಅನ್ಯಾಯಕ್ಕೆ ಸೋಲು

ದೇವೇಗೌಡರು ಜಿಲ್ಲೆಗೆ ಮಾಡಿದ್ದ ಅನ್ಯಾಯ ಅವರನ್ನು ಸೋಲಿಸಿದೆ. ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾಗಿದ್ದರು ಎಂದರು.

ನನ್ನ ಸ್ನೇಹಿತ ಸಿದ್ದರಾಮಯ್ಯ ಮೋದಿ ಬಗ್ಗೆ‌ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಜನಾಭಿಪ್ರಾಯ ದ ವಿರುದ್ಧವಾಗಿರುವ ಸರ್ಕಾರ ಜನರು ಸಹಿಸಿಲ್ಲ. ಜಿಲ್ಲೆಯ ಸ್ವಾಭಿಮಾನ, ಗೌರವ ಉಳಿಸಿದ್ದಾರೆ ಎಂದರು.

ಹೇಮಾವತಿ ನೀರಿನ ವಿಷಯದಲ್ಲಿ ಮೋಸ ಮಾಡಲು ಯಾರಿಂದಲು ಸಾಧ್ಯವಿಲ್ಲ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT