ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ ತಾಲ್ಲೂಕಿನ ಕೆರೆಯಲ್ಲಿ ಗರ್ಭಿಣಿ ಶವ ಪತ್ತೆ: ಕೊಲೆ ಶಂಕೆ

Last Updated 28 ಮಾರ್ಚ್ 2023, 5:48 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿಯ ಅಮ್ಮನಹಳ್ಳಿ ಕೆರೆಯಲ್ಲಿ ಸೋಮವಾರ ಗರ್ಭಿಣಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮಧುಶ್ರೀ (25) ಮೃತಪಟ್ಟವರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಣೆಕಟ್ಟಿ ಗ್ರಾಮದ ಈಕೆಯನ್ನು ನಾಲ್ಕು ವರ್ಷದ ಹಿಂದೆ ಅಮ್ಮನಹಳ್ಳಿ ಗ್ರಾಮದ ಶಿಕ್ಷಕ ಯೋಗೀಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಎರಡು ವರ್ಷದ ಗಂಡು ಮಗು ಇದೆ.

ಭಾನುವಾರ ಸಂಜೆ ಯೋಗೀಶ್ ಅವರು, ಪತ್ನಿ ಮಧುಶ್ರೀ ಅವರ ತಂದೆ ಮತ್ತು ತಾಯಿಗೆ ಮೊಬೈಲ್ ಕರೆ ಮಾಡಿ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದರು. ತವರು ಮನೆಯವರು ರಾತ್ರಿಯೇ ಅಮ್ಮನಹಳ್ಳಿಗೆ ಬಂದು ಹುಡುಕಾಡುವಷ್ಟರಲ್ಲಿ ಬೆಳಿಗ್ಗೆ ಮಧುಶ್ರೀ ಶವವಾಗಿ ಕೆರೆಯಲ್ಲಿ ತೇಲುತ್ತಿರುವ ಬೆಳಕಿಗೆ ಬಂದಿದೆ. ಮಗುವೂ ನಾಪತ್ತೆಯಾಗಿದೆ.

ಮಗಳ ಸಾವಿಗೆ ಆಕೆಯ ಗಂಡನೇ ಕಾರಣವೆಂದು ಪೋಷಕರು ಆರೋಪಿಸಿದ್ದು, ಗುಬ್ಬಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಯೋಗೀಶ್‌ನನ್ನು ಬಂಧಿಸಲಾಗಿದೆ.

ಗೃಹಿಣಿಯ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT