ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನ ಅಮಾನಿಕೆರೆಗೆ 'ಅಂತರಗಂಗೆ' ಕಂಟಕ!

ಒಂದು ತಿಂಗಳೊಳಗೆ ಕಳೆ ತೆರವಿಗೆ ಸಿದ್ಧತೆ l ಶಾಸಕ ಜ್ಯೋತಿ ಗಣೇಶ್‌ ಕೆರೆ ಪ್ರದೇಶಕ್ಕೆ ಭೇಟಿ
Last Updated 20 ನವೆಂಬರ್ 2020, 1:53 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಿರುವ ಅಮಾನಿಕೆರೆಗೆ ನೀರು ತುಂಬಿಸಿದ್ದು, ಒಂದೇ ತಿಂಗಳಲ್ಲಿ ಅಂತರಗಂಗೆ ಕಳೆ ಬೆಳೆದಿದ್ದು, ತೆರವುಗೊಳಿಸಲು ಸಿದ್ಧತೆ ನಡೆದಿದೆ.

ಶಾಸಕ ಜ್ಯೋತಿಗಣೇಶ್ ಬುಧವಾರ ಕೆರೆಗೆ ಭೇಟಿ ನೀಡಿ, ಟೂಡಾ ಆಯುಕ್ತ ಯೋಗಾನಂದ್, ವನ್ಯಜೀವಿ ತಜ್ಞರು, ಕೆರೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಮುಖರ ಜತೆ ಚರ್ಚಿಸಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಅಂತರಗಂಗೆ ಕಳೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ತೆರವುಗೊಳಿಸದಿದ್ದರೆ ಮುಂದೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಪಕ್ಷಿಧಾಮ ನಿರ್ಮಿಸುವುದರ ಜತೆಗೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅಂತರಗಂಗೆ ತೆರವುಗೊಳಿಸಲು ಹೈದರಾಬಾದ್ ತಜ್ಞರು ತಯಾರಿಸಿರುವ ಯಂತ್ರೋಪಕರಣಗಳು ಸಹಕಾರಿಯಾಗಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಶಾಶ್ವತವಾಗಿ ಅಂತರಗಂಗೆ ನಿಯಂತ್ರಿಸಲು ಯೋಜನೆ ರೂಪಿಸಲಾಗುವುದು. ಅದಕ್ಕಾಗಿ ಟೂಡಾ ವತಿ
ಯಿಂದಲೇ ಯಂತ್ರೋಪಕರಣ ಖರೀದಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಯಂತ್ರೋಪಕರಣ ಖರೀದಿಸುವವರೆಗೆ ಟೂಡಾ, ಮೀನುಗಾರಿಕೆ ಇಲಾಖೆ ವತಿಯಿಂದ ಬೋಟ್ ಮೂಲಕ ಹೈದರಾಬಾದ್ ಮುಳುಗು ತಜ್ಞರಿಂದ ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಅದನ್ನು ತೆರವುಗೊಳಿಸದಿದ್ದರೆ ಕೆರೆ ತುಂಬ ಹರಡಿಕೊಳ್ಳಲಿದೆ ಎಂದು ಹೇಳಿದರು.

‘ಪ್ರಾಯೋಗಿಕವಾಗಿ ಜನರಿಂದಲೇ ತೆರವುಗೊಳಿಸುವುದು ಸೂಕ್ತ. ಇದಕ್ಕೆ ₹ 20 ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ. ಕೆಲವೇ ದಿನಗಳಲ್ಲಿ ಇದು ಈಗ ಇರುವುದಕ್ಕಿಂತ ಎರಡರಷ್ಟು ವಿಸ್ತರಿಸುತ್ತದೆ. ಈ ಕಳೆ ಗಿಡದಿಂದಾಗಿ ಸಾಮಾನ್ಯವಾಗಿ ಆವಿಯಾಗುವ ನೀರಿಗಿಂತ ಮೂರು ಪಟ್ಟು ಆವಿಯಾಗಲಿದ್ದು, ಇದರಿಂದ ವನ್ಯಜೀವಿಗಳಿಗೂ ತೊಂದರೆಯಾಗಲಿದೆ’ ಎಂದು ವನ್ಯಜೀವಿ ತಜ್ಞ ಟಿ.ವಿ.ಎನ್. ಮೂರ್ತಿ ತಿಳಿಸಿದರು.

ಪಾರ್ಥೇನಿಯಂ ರೀತಿ ನೈಸರ್ಗಿಕ ವಾಗಿ ನಿಯಂತ್ರಿಸುವುದು ಕಷ್ಟಕರ. ಈ ಹಿಂದೆ ಇದ್ದ ಅಂತರಗಂಗೆಯಿಂದಲೇ ಈಗ ಮತ್ತೆ ಕಾಣಿಸಿಕೊಂಡಿದೆ. ಅಮಾನಿಕೆರೆ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡುವುದರಿಂದ ರಾಸಾಯನಿಕ ಸಿಂಪಡಿಸದೆ ಯಂತ್ರೋಪಕರಣಗಳ ಬಳಕೆಯಿಂದ ನಾಶ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT